ಬೆಳಗಾವಿ: ಸ್ನೇಹಿತನ ಪತ್ನಿಯ ಮೇಲೆ ಕಣ್ಣು ಹಾಕಿದ ವ್ಯಕ್ತಿಗೆ ಪತಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡಿದದೆ.
ಈ ಘಟನೆ ಜಿಲ್ಲೆಯ ಹುಲಿಯಾಳ ಗ್ರಾಮದಲ್ಲಿ ನಡೆದಿದೆ. ಅಭಿಷೇಕ್ ಬುಡ್ರಿ (19) ಕೊಲೆಯಾದ (Muder) ಯುವಕ ಎನ್ನಲಾಗಿದ್ದು, ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಹುಲ್ಲೆಪ್ಪಾ ಕರೀಕಟ್ಟಿ ಎಂಬಾತನ ಪತ್ನಿ ಮೇಲೆ ಅಭಿಷೇಕ್ ಬುಡ್ರಿ ಕಣ್ಣು ಹಾಕಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹುಲ್ಲೆಪ್ಪಾ, ಆಗಸ್ಟ್ 9 ರಂದು ಬರ್ತ್ಡೇ ಪಾರ್ಟಿ ಇದೆ ಎಂದು ಅಭಿಷೇಕ್ನನ್ನು ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ.
ಘಟನೆ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹುಲ್ಲೆಪ್ಪಾನನ್ನು ಪೊಲೀಸರು ಬಂಧಿಸಿದ್ದಾರೆ.








