ತಗಡಿನ ಮನೆಗೆ ಲಕ್ಷ ಲಕ್ಷ ಬಿಲ್
ಕೇವಲ 2 ಬಲ್ಬ್ ಉರಿಸುತ್ತಿದ್ದ ವೃದ್ಧೆ
1 ಲಕ್ಷದ 3 ಸಾವಿರದ 315 ರೂ. ಬಿಲ್ ನೀಡಿದ ಹೆಸ್ಕಾಂ
ಕೊಪ್ಪಳ ಜಿಲ್ಲೆಯಲ್ಲಿ ನಡೆದಿರುವ ಘಟನೆ
ಕೊಪ್ಪಳ : ರಾಜ್ಯ ಸರ್ಕಾರ ಉಚಿತ ವಿದ್ಯುತ್ ಯೋಜನೆ ಘೋಷಿಸಿದೆ. ಈ ಮಧ್ಯೆ ವಿದ್ಯುತ್ ದರ Current Bill ಏರಿಕೆಯಾಗಿದ್ದು, ಹಲವೆಡೆ ಆಕ್ರೋಶಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಕೇವಲ 2 ಬಲ್ಬ್ ಉರಿಸುತ್ತಿದ್ದ ಅದೂ ರಾತ್ರಿ ವೇಳೆ ಮಾತ್ರ ಉರಿಸುವ ವೃದ್ಧೆಯೊಬ್ಬರಿಗೆ ಲಕ್ಷಕ್ಕೂ ಅಧಿಕ ಬಿಲ್ ಬಂದಿದ್ದು, ಕಂಗಾಲಾಗಿದ್ದಾರೆ.

ತಗಡಿನ ಶೆಡ್ ನಲ್ಲಿ ವಾಸಿಸುವ ವೃದ್ಧೆಯೊಬ್ಬರ ಮನೆಗೆ ಜೆಸ್ಕಾಂ ಸಿಬ್ಬಂದಿ 1 ಲಕ್ಷದ 3 ಸಾವಿರದ 315 ರೂ. ಬಿಲ್ ನೀಡಿದೆ. ಈ ಘಟನೆ ಕೊಪ್ಪಳದಲ್ಲಿ (Koppala) ನಡೆದಿದ್ದು, ವೃದ್ಧೆ ತೀವ್ರ ಆತಂಕದಲ್ಲಿದ್ದಾರೆ. ಆಕೆಯ ಮಗ ಈ ಮನೆ ಮಾರಿದರೂ ಅಷ್ಟು ಬಿಲ್ (Electricity Bill) ಕಟ್ಟಲು ಸಾಧ್ಯವಿಲ್ಲ ಎಂದು ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕತಪಡಿಸುತ್ತಿದ್ದಾರೆ.
ವೃದ್ಧೆ ಗಿರಿಜಮ್ಮ ಎಂಬುವರ ಮನೆಗೆ ಈ ಬಿಲ್ ಬಂದಿದ್ದು, ಕಳೆದ ಆರು ತಿಂಗಳಿಂದ ಜೆಸ್ಕಾಂ (Gescom) ಸಿಬ್ಬಂದಿ ಇಷ್ಟೆಲ್ಲ ಬಿಲ್ ನೀಡುತ್ತಿದ್ದಾರೆ. ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಇದ್ದರೂ ಮೊದಲು ಪ್ರತಿ ತಿಂಗಳು 70 ರೂ. ನಿಂದ 80 ರೂ. ಬಿಲ್ ನೀಡುತ್ತಿದ್ದ ಹೆಸ್ಕಾಂ ಸಿಬ್ಬಂದಿ, ಇಷ್ಟೊಂದು ದೊಡ್ಡ ಬಿಲ್ ನೀಡಿದೆ. ನಾವಿರುವುದು ಇಬ್ಬರೇ. ನಾವೆಷ್ಟು ಕರೆಂಟ್ ಬಳಸುತ್ತೇವೆ? ಈಗ ಇದ್ದಕ್ಕಿದ್ದಂತೆ ಇಷ್ಟೆಲ್ಲ ಜಾಸ್ತಿಯಾಗಿದೆ ಎಂದು ವೃದ್ಧೆ ಗೋಳಾಡುತ್ತಿದ್ದಾರೆ.
ಭಾಗ್ಯ ಜ್ಯೋತಿ (Bhagya Jyothi) ಯೋಜನೆಯ ಪ್ರಕಾರ 18 ಯೂನಿಟ್ ಸರ್ಕಾರವೇ ಪಾವತಿ ಮಾಡುತ್ತದೆ. ಆದರೆ ಕಳೆದ ಆರು ತಿಂಗಳ ಹಿಂದೆ ಈ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಕೆ ಮಾಡಿದ್ದಾರೆ. ಮೀಟರ್ ಹಾಕದಂದಿನಿಂದ ಹತ್ತರಿಂದ ಇಪ್ಪತ್ತು ಸಾವಿರ ರೂ. ಬಿಲ್ ಬರುತ್ತಿದೆ. ಆದರೆ ಬಿಲ್ ಕೊಟ್ಟು ಹೋಗುವ ಸಿಬ್ಬಂದಿ ಹಣ ಕೇಳಲು ಮಾತ್ರ ಬರುತ್ತಿಲ್ಲ.








