Lalit Modi : ಎರಡು ವಾರದಲ್ಲಿ ಎರಡು ಬಾರಿ ಕೋವಿಡ್ ಗೆ ತುತ್ತಾದ ಲಲಿತ್ ಮೋದಿ..!!
ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಕೋವಿಡ್ ಸೊಂಕು ತಗುಲಿದ ಹಿನ್ನೆಲೆ ನಿರಂತರ ಆಮ್ಲಜನಕದ ಬೆಂಬಲದಲ್ಲಿದ್ದಾರೆ. ಅವರು ಎರಡು ವಾರಗಳಲ್ಲಿ ಎರಡು ಬಾರಿ ಕೋವಿಡ್-19, ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಮೆಕ್ಸಿಕೋ ನಗರದಲ್ಲಿ ವಾಸಿಸುತ್ತಿರುವ ಲಲಿತ್ ಮೋದಿ ಅವರನ್ನು ಅವರ ಮಗ ಮತ್ತು ವೈದ್ಯರು ಲಂಡನ್‌ಗೆ ವಿಮಾನದಲ್ಲಿ ಕರೆದೊಯ್ದು ಅಲ್ಲಿ ಅವರಿಗೆ ಚಿಕಿತ್ಸೆ ನೀಡಿದರು. ಈ ಮಾಹಿತಿಯನ್ನು ಸ್ವತಃ ಲಲಿತ್ ಮೋದಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯ ಮೂಲಕ ನೀಡಿದ್ದಾರೆ.
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರಿಗೆ ಯಾವುದೇ ಅಪಾಯವಿಲ್ಲ ಎಂದು ತಿಳಿದು ಬಂದಿದೆ. ಅವರು ಎರಡು ವಾರಗಳಲ್ಲಿ ಎರಡು ಬಾರಿ ನ್ಯುಮೋನಿಯಾದಿಂದ ಕೋವಿಡ್ ಗೆ ತುತ್ತಾಗಿದ್ದಾರೆ. ಈ ಮಾಹಿತಿಯನ್ನು ಸ್ವತಃ ಲಲಿತ್ ಮೋದಿ ನೀಡಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ, ಲಲಿತ್ ಮೋದಿ ಅವರು ವೈದ್ಯರು ಮತ್ತು ಮಗ ಕುಶಾಲ್ ನನ್ನನ್ನು ಏರ್ ಆಂಬ್ಯುಲೆನ್ಸ್ ಮೂಲಕ ಲಂಡನ್‌ಗೆ ಕರೆತಂದು ಚಿಕಿತ್ಸೆ ನೀಡಿದರು. ಇದರಿಂದಾಗಿ ನಾನು ಸಾವಿನಿಂದ ಪಾರಾಗಿರುವೆ. ಆದರೆ ಇನ್ನೂ ನಾನು 24 ಗಂಟೆಗಳ ಕಾಲ ಆಮ್ಲಜನಕದ ಸಹಾಯದಿಂದ ಇರಬೇಕಾಗಿದೆ.
ಲಲಿತ್ ಮೋದಿ ಐಪಿಎಲ್ ಆರಂಭಿಸಿದರು
ಲಲಿತ್ ಮೋದಿ ಐಪಿಎಲ್ ಶುರು ಮಾಡಿದ್ದರು. 2005ರಿಂದ 2010ರವರೆಗೆ ಬಿಸಿಸಿಐ ಉಪಾಧ್ಯಕ್ಷರಾಗಿದ್ದರು. ಅವರು 2008 ರಿಂದ 2010 ರವರೆಗೆ IPL ನ ಅಧ್ಯಕ್ಷ ಮತ್ತು ಆಯುಕ್ತರಾಗಿದ್ದರು. 2010ರಲ್ಲಿ ರಿಗ್ಗಿಂಗ್ ಆರೋಪದ ಮೇಲೆ ಲಲಿತ್ ಅವರನ್ನು ಐಪಿಎಲ್ ಕಮಿಷನರ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಬಿಸಿಸಿಐನಿಂದಲೂ ಅವರನ್ನು ತೆಗೆದುಹಾಕಲಾಗಿತ್ತು. ಲಲಿತ್ 2010 ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದ ನಂತರ ದೇಶದಿಂದ ಪರಾರಿಯಾಗಿದ್ದರು.
Lalit Modi, Former IPL chairman, covid-19
Lalit Modi tested positive for covid19 for two times in 2 weeks