Manasa Joshi-ಅಮ್ಮನಾದ ಖುಷಿಯಲ್ಲಿ ಕನ್ನಡ ನಟಿ
ಮಾನಸಾ ಜೋಶಿ ಅವರಿಗೆ ಹೆಣ್ಣು ಮಗು
ಹೆಣ್ಣು ಮಗುವಿನ ಪೋಷಕರು ಎನ್ನುವುದಕ್ಕೆ ಹೆಮ್ಮೆ ಎಂದ ನಟಿ
ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡ ನಟಿ.
ಮಗಳ ಮುಗುಳುನಗೆ ನೋಡಿ ಖುಷಿಯಾಯ್ತು ಎಂದ ನಟಿ
ಮಾನಸಾ ಜೋಶಿ ಅವರು ಮಹಾದೇವಿ ಮತ್ತು ಮಂಗಳ ಗೌರಿ ಮದುವೆ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದ ನಟಿಯಾಗಿದ್ದಾರೆ.
ಮಂಗಳಗೌರಿ ಧಾರಾವಾಹಿಯಲ್ಲಿ ರಾಜೇಶ್ವರಿ ಪಾತ್ರ ನಿರ್ವಹಿಸಿದ್ದ ಮಾನಸಾ ಜೋಶಿ ಈ ಮೂಲಕ ಪ್ರಸಿದ್ಧಿ ಪಡೆದಿದ್ದರು. ಧಾರಾವಾಹಿ ಈಗ ಮುಕ್ತಾಯವಾಗಿದೆ ಈ ಧಾರವಾಹಿಯೂ 3 ಸಾವಿರಕ್ಕೂ ಹೆಚ್ಚು ಎಪಿಸೋಡಗಳ ಪ್ರದರ್ಷನ ಕಂಡಿದೆ
ಈಗ ಮಾನಸಾ ಜೋಶಿ ಅವರಿಗೆ ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ .ಈ ಕುರಿತು ಹೆಣ್ಣು ಮಗುವಿನ ಪೋಷಕರು ಎನ್ನುವುದಕ್ಕೆ ಹೆಮ್ಮೆ ಎಂದ ನಟಿ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ಇನ್‍ಸ್ಟಾಗ್ರಾಂ ನಲ್ಲಿ ಮಗಳ ಮುಗುಳುನಗೆ ನೋಡಿ ಖುಷಿಯಾಯ್ತು. ಅವಳು ತುಂಬಾ ಮುದ್ದಾಗಿದ್ದಾಳೆ ಎಂದು ಮಾನಸ ಜೋಶಿ ಅವರು ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.
ಲಾಸ್ಟ್ ಬಸ್, ಅಮೃತ ಅಪಾರ್ಟ್‍ಮೆಂಟ್ಸ್, ಯಶೋಗಾಥೆ, ಹರಿವು, ಹಜ್, ಕಿರುಗೂರಿನ ಗಯ್ಯಾಳಿಗಳು ಸೇರಿ ಹಲವು ಕನ್ನಡ ಚಲನಚಿತ್ರಗಳಲ್ಲೂ ಸಹ ಮಾನಸ ಜೋಶಿ ಅಭಿನಯಿಸಿದ್ದಾರೆ.
2015 ರ ಡಿಸೆಂಬರ್ ನಲ್ಲಿ ಮಾನಸಾ ಜೋಶಿ ಸಂಕರ್ಷಣ ಪ್ರಸಾದ್ ಎನ್ನುವವರನ್ನು ಮದುವೆ ಆಗಿದ್ದರು. ಮಾನಸಾ ಜೋಶಿ ಅವರು ಕಥಕ್ ನೃತ್ಯಗಾರ್ತಿಯೂ ಹೌದು.
ಡ್ಯಾನ್ಸ ಮಾನಸಾ ಜೋಶಿ ಅವರಿಗೆ ಉದ್ದನೆಯ ಕೂದಲು ಅಂದ್ರೆ ತುಂಬಾ ಇಷ್ಟ. ರ್ಕ್ಯಾನ್ಸರ್ ರೋಗಿಗಳಿಗೆ ತಮ್ಮ ಕೂದನ್ನು ದಾನ ಮಾಡಿದ್ದ ನಟಿ ಮಾನಸಾ ಜೋಶಿ ತಾಯಿಯಾಗುತ್ತಿರುವಾಗ, ಅದಕ್ಕೆ ಕೂದಲು ಬೆಳೆಸಿದ್ದೆ. ಈಗ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುತ್ತಿದ್ದೇನೆ ಎಂದು ಮಾನಸಾ ಜೋಶಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ರು.