ಜಮ್ಮು-ಕಾಶ್ಮೀರದ ಉಧಂಪುರ್ ಜಿಲ್ಲೆಯಲ್ಲಿ ಭೂಕುಸಿತ – ಐದು ಮನೆಗಳಿಗೆ ಹಾನಿ
ಜಮ್ಮು-ಕಾಶ್ಮೀರ, ಸೆಪ್ಟೆಂಬರ್06: ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ಭೂಕುಸಿತ ಸಂಭವಿಸಿ ಐದು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಭಾರಿ ಮಳೆಯಿಂದ ಶನಿವಾರ ತಡರಾತ್ರಿ ಗುಡ್ಡಗಾಡು ಬಸಂತ್ ಘರ್ ಉಪ ವಿಭಾಗದಲ್ಲಿ ಭೂಕುಸಿತವು ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಮನೆಯಲ್ಲಿ ವಾಸವಾಗಿದ್ದವರು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರಿಂದ ಯಾರಿಗೂ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ, ಉಧಂಪುರದ ಜಿಲ್ಲಾ ಅಭಿವೃದ್ಧಿ ಆಯುಕ್ತ ಪಿಯೂಷ್ ಸಿಂಗ್ಲಾ ಅವರು ವಿವಿಧ ಇಲಾಖೆಗಳಿಂದ ತ್ವರಿತ ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಿದ್ದು, ಸ್ವತಃ ಪರಿಹಾರ ಮತ್ತು ಪುನರ್ವಸತಿ ಕ್ರಮಗಳ ಮೇಲ್ವಿಚಾರಣೆ ನಡೆಸಿದರು.