ಲ್ಯಾಪಟಾಪ್ ಡಿಸ್ಪ್ಲೇ ಸ್ವಚ್ಛಗೊಳಿಸುವ ಬಟ್ಟೆ ಬೆಲೆ ಕೇಳಿ ಹೌಹಾರುವುದು ಗ್ಯಾರಂಟೀ….
ಆಪಲ್ ಕಂಪನಿಯ ಪ್ರಾಡಕ್ಟ್ ಗಳು ಅವುಗಳ ಗುಣಮಟ್ಟಕ್ಕೆ ಎಷ್ಟು ಪ್ರಸಿದ್ಧಿಯೋ…ಅಷ್ಟೇ ಪ್ರಸಿದ್ಧಿ ಅವುಗಳ ದುಬಾರಿ ಬೆಲೆ…ಸಾಮನ್ಯ ಜನತೆ ಅವುಗಳನ್ನ ಕೊಂಡುಕೊಳ್ಳಲು ಸಾಕಷ್ಟು ಕಸರತ್ತು ನಡೆಸಬೇಕು…
ಇತ್ತೀಚಿಗಷ್ಟೆ ಕಂಪನಿ ಹೊಸ ಪ್ರಾಡಕ್ಟ್ ಒಂದನ್ನ ಬಿಡುಗಡೆ ಮಾಡಿದ್ದು ಅದರ ಬೆಲೆ ಕೇಳಿ ಜನತೆ ಹೌಹಾರಿದ್ದಾರೆ… ಆಪಲ್ ಪ್ರಾಡಕ್ಟ್ ಗಳ ಪರದೆ (ಸ್ಕ್ರೀನ್ ಡಿಸ್ಪ್ಲೆ)ಗಳನ್ನ ಸ್ವಚ್ಛಗೊಳಿಸುದಕ್ಕೆ ಅಂತಲೇ ಬಟ್ಟೆಯೊಂದನ್ನ ಬಿಡುಗಡೆ ಮಾಡಿದ್ದು ಅದರ ಬೆಲೆ ಬರೊಬ್ಬರಿ 1900 ರುಪಾಯಿ…
ಸಾಮನ್ಯವಾಗಿ ಉನ್ನತ ಮಟ್ಟದ ಲ್ಯಾಪಟಾಪ ಕೊಂಡುಕೊಂಡಾಗ ಕಂಪನಿಗಳೆ ಉಚಿತವಾಗಿ ಸ್ವಚ್ಛಗೊಳಿಸುವ ಬಟ್ಟೆಯನ್ನ ಕೊಡುತ್ತವೆ ಅದರೆ ಆಪಲ್ ಕಂಪನಿಲ್ಲಿ ಇದನ್ನ ಪ್ರತ್ಯೇಕವಾಗಿ ಖರೀದಿಸಬೇಕು…. ಕಂಪನಿ ಇದನ್ನ ಪಾಲಿಶಿಂಗ್ ಬಟ್ಟೆ ಎಂದು ಕರೆಯಿತ್ತಿದ್ದು,ಯಾವುದೇ ಆಪಲ್ ಪ್ರಾಡಕ್ಟ್ ಡಿಸ್ಪ್ಲೆಯನ್ನ ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತದೆ..