ಲಂಕಾ ತಂಡದಲ್ಲಿ ಲಸಿತ್ ಮಾಲಿಂಗಗೆ ಮಹತ್ವ ಹುದ್ದೆ..!
ಶ್ರೀಲಂಕಾ ತಂಡದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯಲಿದ್ದು, ತಂಡದ ಬೌಲಿಂಗ್ ವಿಭಾಗ ಸಲಹೆಗಾರರಾಗಿ ದಿಗ್ಗಜ ಬೌಲರ್ ಲಸಿತ್ ಮಾಲಿಂಗ ಆಯ್ಕೆಯಾಗುವ ಸಾಧ್ಯತೆ ಇದೆ.
ಮುಂಬರುವ ಆಸ್ಟ್ರೇಲಿಯ ಸರಣಿಗೆ ಮಾಲಿಂಗನಿ ಅವರನ್ನು ಸಲಹೆಗಾರ ಕೋಚ್ ಆಗಿ ನೇಮಿಸುವಂತೆ ಉನ್ನತ ಮಟ್ಟದ ಕ್ರಿಕೆಟ್ ಸಲಹಾ ಸಮಿತಿಯು ಶ್ರೀಲಂಕಾ ಕ್ರಿಕೆಟ್ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಲಂಕಾ ಐದು ಟಿ20 ಪಂದ್ಯಗಳನ್ನು ಆಡಲಿದೆ.
ಕಳೆದ ವರ್ಷ ಮಾಲಿಂಗ ಎಲ್ಲ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿರೋದು ಗೊತ್ತಿರುವ ವಿಚಾರವೇ.
ಮಾಲಿಂಗ ತಮ್ಮ ಟಿ20 ವೃತ್ತಿಜೀವನದಲ್ಲಿ 390 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೇ ಒಂಬತ್ತು ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ತಂಡದ ನಾಯಕತ್ವ ವಹಿಸಿದ್ದರು.
ಅದೇ ರೀತಿ 24 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಮಾಲಿಂಗ 15 ಪಂದ್ಯಗಳಲ್ಲಿ ಸೋತಿದ್ದಾರೆ. ಇವರೊಂದಿಗೆ ಮಹೇಲಾ ಜಯವರ್ಧನೆ ಕೂಡ ಸಲಹೆಗಾರ ಕೋಚ್ ಆಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದಾರೆ.