ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸುಮಾರು 50 ವರ್ಷಗಳಿಂದ ದೇವರ ಸೇವಾರೂಪದಲ್ಲಿದ್ದ ಲತಾ ಎಂಬ 60 ವರ್ಷದ ಆನೆ ಅನಾರೋಗ್ಯಕ್ಕೆ ತುತ್ತಾಗಿದೆ.
ಧರ್ಮಸ್ಥಳದಲ್ಲಿ ಪ್ರತಿ ವರ್ಷ ನಡೆಯುವ ಲಕ್ಷ ದೀಪೋತ್ಸವ, ವರ್ಷಾವಧಿ ಜಾತ್ರೆ, ನಡಾವಳಿ ಸೇರಿದಂತೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಗಾಂಭೀರ್ಯತೆ ಮೆರೆದಿದ್ದ ಲತಾ ಆನೆ ಸೌಮ್ಯ ಸ್ವಭಾವದಿಂದ ಭಕ್ತರ ಪ್ರಶಂಸೆಗೆ ಕಾರಣವಾಗಿತ್ತು. ಆದರೆ, ಇತ್ತೀಚೆಗೆ ಇದು ಅನಾರೋಗ್ಯದಿಂದ ಬಳಲುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದೆ. ನಂತರ ಸಂಜೆ ಅಂತ್ಯಸಂಸ್ಕಾರ ಮಾಡಲಾಯಿತು.