50MP ಟ್ರಿಪಲ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗುತ್ತಿದೆ ‘ಲಾವಾ ಬ್ಲೇಜ್ ಪ್ರೊ’
ಬಹುರಾಷ್ಟ್ರೀಯ ಭಾರತೀಯ ಎಲೆಕ್ಟ್ರಾನಿಕ್ಸ್ ಕಂಪನಿ, ಲಾವಾ ಭಾರತದಲ್ಲಿ ಹೊಸ ಬಜೆಟ್ ಫೋನ್ ‘ಲಾವಾ ಬ್ಲೇಜ್ ಪ್ರೊ’ ಅನ್ನ 10,499 ಬೆಲೆಯೊಂದಿಗೆ ಬಿಡುಗಡೆ ಮಾಡಿದೆ. ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 6.5-ಇಂಚಿನ IPS HD ಡಿಸ್ಪ್ಲೇ ಮತ್ತು 5000mAh ಸಾಮರ್ಥ್ಯದ ಬಿಗ್ ಬ್ಯಾಟರಿಯೊಂದಿಗೆ ಬಿಡುಗಡೆಯಾಗುತ್ತಿದೆ.
ಸ್ಮಾರ್ಟ್ಫೋನ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ – ಹಸಿರು, ಕಿತ್ತಳೆ, ನೀಲಿ ಮತ್ತು ಬಿಳಿ. ಫೋನ್ ಫ್ಲಿಪ್‌ಕಾರ್ಟ್, ಲಾವಾ ಇ-ಸ್ಟೋರ್ ಮತ್ತು ದೇಶಾದ್ಯಂತದ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ದೃಢಪಡಿಸಿದೆ.
Lava Blaze Pro ಅನ್ನು 6.5-ಇಂಚಿನ IPS HD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ನೊಂದಿಗೆ ಪ್ಯಾಕ್ ಮಾಡಲಾಗಿದೆ. ಇದು MediaTek G37 ಆಕ್ಟಾ-ಕೋರ್ ಪ್ರೊಸೆಸರ್ ಜೊತೆಗೆ 4GB RAM ಮತ್ತು 64GB ಇಂಟರ್ನಲ್ ಮೆಮೋರಿ ನಿಡಲಾಗಿದೆ. ಮೈಕ್ರೊ SD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಬಹುದು.
ಲಾವಾ ಬ್ಲೇಜ್ ಪ್ರೊ: ಪ್ರಮುಖ ವಿಶೇಷಣಗಳು
- Lava Blaze Pro 50-ಮೆಗಾಪಿಕ್ಸೆಲ್ AI ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ 6x ಜೂಮ್ ಬೆಂಬಲದೊಂದಿಗೆ ಬರುತ್ತಿದೆ. ಇದು ಸ್ಮಾರ್ಟ್‌ಫೋನ್‌ನ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ.
- ಸ್ಮಾರ್ಟ್ಫೋನ್ ಹೆಚ್ಚುವರಿ 3GB RAM ಸಪೋರ್ಟ್ನೊಂದಿಗೆ ಬರುತ್ತಿದೆ.
- 10W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಫೋನ್ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಬಾಕ್ಸ್ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಅನ್ನು ಒಳಗೊಂಡಿದೆ.
- ಲಾವಾ ಬ್ಲೇಜ್ ಪ್ರೊ ನಾಲ್ಕು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ – ಗ್ಲಾಸ್ ಗ್ರೀನ್, ಗ್ಲಾಸ್ ಆರೆಂಜ್, ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಗೋಲ್ಡ್.
- Lava Blaze Pro ಅನ್ನು 6.5-ಇಂಚಿನ IPS HD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ನೊಂದಿಗೆ ಪ್ಯಾಕ್ ಮಾಡಲಾಗಿದೆ.
- ಬ್ಲೇಜ್ ಪ್ರೊ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
- ಮುಂಭಾಗದಲ್ಲಿ, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಹೊಸದಾಗಿ ಬಿಡುಗಡೆಯಾದ ಲಾವಾ ಫೋನ್ 8-ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುತ್ತದೆ.
- ಸೈಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಬಾಟಮ್-ಫೈರಿಂಗ್ ಸ್ಪೀಕರ್ ಮತ್ತು ಪ್ರೀಮಿಯಂ ಫ್ರಾಸ್ಟೆಡ್ ಗ್ಲಾಸ್ ವಿನ್ಯಾಸ ಸಹ ಇದೆ.
- ಹೆಚ್ಚಿನ ಭದ್ರತೆಗಾಗಿ ಫೇಸ್ ಅನ್‌ಲಾಕ್ ಬೆಂಬಲ ಮತ್ತು ಕೆಲವು ಇತರ ಹೆಚ್ಚುವರಿ ವೈಶಿಷ್ಟ್ಯಗಳು ಸಹ ಇವೆ.