ಗುಜರಾತ್ ನಲ್ಲಿ ‘ಲವ್ ಜಿಹಾದ್’ ವಿರೋಧಿ ಕಾನೂನು ಜಾರಿಯಾಗುತ್ತಿಲ್ಲ..!
ಗುಜರಾತ್ : ದೇಶಾದ್ಯಂತ ಬಿಜೆಪಿ ಆಡಳಿತವಿರುವ ಬಹುತೇಕ ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸುವ ತಯಾರಿ ಸಾಗಿದೆ. ಆದ್ರೆ ಗುಜರಾತ್ ಸರಕಾರ ಮಾತ್ರ ಈ ಕಾನೂನನ್ನು ಸದ್ಯಕ್ಕೆ ಜಾರಿಗೊಳಿಸದಿರಲು ನಿರ್ಧರಿಸಿದೆ. ರಾಜ್ಯದ ಅಡ್ವೊಕೇಟ್ ಜನರಲ್ ಸೇರಿದಂತೆ ಹಲವು ಮಂದಿ ಕಾನೂನು ತಜ್ಞರು ಹೊಸ ಕಾಯ್ದೆಗೆ ಕಾನೂನಾತ್ಮಕ ಮಾನ್ಯತೆ ಸಿಗದು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದೆ.
ಮರಾಠಿ ಮಾತನಾಡುವಂತೆ ಕನ್ನಡದ ಲಾರಿ ಚಾಲಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ
ಕಾನೂನು ತಜ್ಞರ ವಲಯದಿಂದ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾರ್ಚ್ 1ರಿಂದ ಆರಂಭವಾಗುವ ಬಜೆಟ್ ಅಧಿವೇಶನದ ವೇಳೆ ಈ ಕುರಿತ ಮಸೂದೆ ಮಂಡಿಸದಿರಲು ಸರಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಬಿಜೆಪಿ ಆಡಳಿತದ ಕೆಲ ರಾಜ್ಯಗಳು ಈಗಾಗಲೇ ಮತಾಂತರ ವಿರೋಧಿ ಕಾನೂನುಗಳನ್ನ ಜಾರಿಗೆ ತಂದಿವೆ.
ಡಿರ್ವೊಸ್ ಕೇಸ್ ವಾಪಾಸ್ ಪಡೆಯದಕ್ಕೆ ಪತ್ನಿಯ ಖಾಸಗಿ ಫೋಟೋಗಳ ಹರಿಬಿಟ್ಟ!
ಗುಜರಾತ್ನಲ್ಲಿ ಈಗಾಗಲೇ ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿದ್ದು, ಇದರ ಅನ್ವಯ ಬಲವಂತವಾಗಿ, ಆಮಿಷ ಒಡ್ಡಿ ಅಥವಾ ವಂಚನೆ ವಿಧಾನದಿಂದ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಅದಾಗ್ಯೂ ಹೊಸ ಕಾಯ್ದೆ ಜಾರಿಗೆ ಸರಕಾರ ಮುಂದಾಗಿತ್ತು.
ಲವ್ ಜಿಹಾದ್ : ವಿದ್ಯಾರ್ಥಿನಿಯ ಕಿಡ್ನಾಪ್, ಬಲವಂತವಾಗಿ ಇಸ್ಲಾಂಗೆ ಮತಾಂತಕ್ಕೆ ಯತ್ನಿಸಿದ ಶಿಕ್ಷಕ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel