ಮರಾಠಿ ಮಾತನಾಡುವಂತೆ ಕನ್ನಡದ ಲಾರಿ ಚಾಲಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ
ಮಹಾರಾಷ್ಟ್ರದಲ್ಲಿ: ನಮ್ಮ ಕರ್ನಾಟಕದಲ್ಲಿ ಬೇರೆ ಯಾವ ರಾಜ್ಯಗಳಿಂದ ಬಂದ ಜನರನ್ನೂ ನಾವು ಸೌಹಾರ್ದದಿಂದಲೇ ಕಾಣ್ತೇವೆ. ಅವರ ಭಾಷೆ ನಮಗೆ ಬಾರದೇ ಹೋದ್ರೂ ಅವರದ್ದೇ ಬಾಷೆಯಲ್ಲಿ ಅವರ ಜೊತೆ ಮಾತನಾಡುವ ಪ್ರಯತ್ನ ಮಾಡ್ತೇವೆ. ಆದ್ರೆ ನಮ್ಮ ಕನ್ನಡಿಗರಿಗೆ ಬೇರೆ ರಾಜ್ಯಗಳಲ್ಲಿ ಈ ರೀತಿಯಾಗಿ ಸ್ವಾಗತ ಸಿಗಲ್ಲ. ಇದಕ್ಕೆ ಪೂರಕವೆಂಬಂತೆ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳು ಕನ್ನಡದ ಲಾರಿ ಚಾಲಕನನ್ನ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾಯಿದ್ದು, ಮಹಾರಾಷ್ಟ್ರದ ನೆಲದಲ್ಲಿ ಕನ್ನಡಿಗರ ಮೇಲಿನ ಅತ್ಯಾಚಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.
ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಒತ್ತಾಯಿಸಿ ಕರ್ನಾಟಕದ ಲಾರಿ ಚಾಲಕನ ಮೇಲೆ ಹಲ್ಲೆ ಮಹಾರಾಷ್ಟ್ರದ ಸಾತಾರಾ ನಗರದ ಟೋಲ್ ಗೇಟ್ ಬಳಿ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಶುಕ್ರವಾರ ಸಂಜೆ 7 ಗಂಟೆಗೆ ಕರ್ನಾಟಕದ ಲಾರಿ ಚಾಲಕನ ಮೇಲೆ ಮರಾಠಿ ಪುಂಡರು ಹಲ್ಲೆಗೈದಿದ್ದಾರೆ. ಕರ್ನಾಟಕ ಲಾರಿ ಚಾಲಕ ಗೋವಿಂದ್ ಅವರ ಬಟ್ಟೆ ಬಿಚ್ಚಿಸಿ ಕ್ರೌರ್ಯ ಮೆರೆದಿದ್ದಾರೆ. ಮರಾಠಿ ಮಾತನಾಡುವಂತೆ ಒತ್ತಾಯಿಸಿ ಹಲ್ಲೆಗೈದಿರುವ ಘಟನೆಯನ್ನು ಲಾರಿ ಚಾಲಕ ಗೋವಿಂದ್ ಅವರು, ಕನ್ನಡಪರ ಹೋರಾಟಗಾರರೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಬೆಳಗಾವಿಯಿಂದ ಸಾತಾರಾಗೆ ತೆರಳುತ್ತಿದ್ದ ಲಾರಿ ಚಾಲಕ ಗೋವಿಂದ್ ಅವರನ್ನು ಸಾತಾರಾ ಬಳಿಯ ಆನೇವಾಡಿ ಟೋಲ್ ಗೇಟ್ ಬಳಿ ತಡೆದು ಹಲ್ಲೆ ನಡೆಸಿದ್ದಾರೆ.
`ಮದ್ವೆ’ ವಿಚಾರ ಎತ್ತಿ ತಾಪ್ಸಿ ಟ್ವೀಟ್ ಗೆ ಪ್ರತಾಪ್ ಸಿಂಹ ಟಾಂಗ್
ಇನ್ನೂ ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಗೋವಿಂದ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದು, ಸಹಾಯಕ್ಕಾಗಿ ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇನ್ನೂ ಘಟನ ಸಂಬಂಧ ಕೂಡಲೇ ಎಚ್ಚೆತ್ತುಕೊಂಡ ಬೆಳಗಾವಿ ಪೊಲೀಸರು ಚಾಲಕ ಗೋವಿಂದನನ್ನು ಕರೆಸಿಕೊಂಡು ಕೊಂಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಲಾರಿ ಮಾಲೀಕರು ಕೂಡ ಪೊಲೀಸರಿಗೆ ಕೂಡಲೇ ಈ ಬಗ್ಗೆ ಸೂಕ್ತವಾಗಿ ಸ್ಪಂದಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಲವ್ ಜಿಹಾದ್ : ವಿದ್ಯಾರ್ಥಿನಿಯ ಕಿಡ್ನಾಪ್, ಬಲವಂತವಾಗಿ ಇಸ್ಲಾಂಗೆ ಮತಾಂತಕ್ಕೆ ಯತ್ನಿಸಿದ ಶಿಕ್ಷಕ..!
ಘಟನೆ ಬಗ್ಗೆ ಭಯಗೊಂಡಿರುವ ಲಾರಿ ಚಾಲಕ ಗೋವಿಂದ ನನಗೆ ಮರಾಠಿ ಮಾತನಾಡುವಂತೆ ಅಲ್ಲಿನ ಸ್ಥಳೀಯರು ನನ್ನ ಮೇಲೆ ಒತ್ತಡ ಹಾಕಿದರು, ಆದರೆ ನಾನು ನನಗೆ ಕನ್ನಡ ಮಾತ್ರ ಬರುತ್ತದೆ ಅಂತ ಹೇಳಿದೆ. ಆದರಿಂದ ಸಿಸ್ಟಗಿ ಅವರು ನನ್ನ ಅರೆ ಬೆತ್ತಲೆ ಮಾಡಿ ನನ್ನ ಮೇಲೆ ಹಲ್ಲೆ ಮಾಡಿ, ನನ್ನ ಬಟ್ಟೆಗಳನ್ನು ಹರಿದು ಹಾಕಿ ಅವಮಾನ ಮಾಡಿದರು ಅಂತ ಹೇಳಿದ್ದಾರೆ.
2014ರಿಂದ ಭಾರತದಲ್ಲಿ ಒಟ್ಟು 296 ಆಪ್ ಗಳು ಬ್ಲಾಕ್..!
ಅಂತರ್ಜಾತಿ ವಿವಾಹವಾಗಿದ್ದ ನವದಂಪತಿಯ ಮೇಲೆ ಭೀಕರ ಹಲ್ಲೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








