ಬೆಂಗಳೂರು: ಇಂದು ವಿಧಾನ ಪರಿಷತ್ ನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಗೆಲುವು ಸಾಧಿಸಿದ್ದಾರೆ. ಬೆಳಗ್ಗೆ 9 ಘಂಟೆಯಿಂದ ಸಂಜೆ 4 ಘಂಟೆಯವರೆಗೂ ಮತದಾನ ಪ್ರಕ್ರಿಯೆ ನಡೆಯಿತು. ಮತದಾನದ ಬಳಿಕ ಮತ ಏಣಿಕೆ ಪೂರ್ಣಗೊಳಿಸಿ ಲಕ್ಷ್ಮಣ್ ಸವದಿ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭೆಯ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಘೋಷಣೆ ಮಾಡಿದ್ರು.
ಒಟ್ಟು 222 ಮತಗಳ ಪೈಕಿ 120 ಸದಸ್ಯರು ಸವದಿ ಪರ ಮತ ಚಲಾಯಿಸಿದ್ದಾರೆ. ಆ 120 ಮತಗಳಲ್ಲಿ 7 ಮತಗಳು ಅಸಿಂಧುವಾಗಿವೆ. ಹೀಗಾಗಿ 113 ಮತಗಳು ಲಕ್ಷ್ಮಣ್ ಸವದಿ ಪರ ಚಲಾವಣೆಯಾಗಿದ್ದು, ಸವದಿ ಅಧಿಕೃತವಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.