ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕೇವಲ 7 ತಿಂಗಳ ಮಗುವಿನ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಈ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದ್ದು, ವೈದ್ಯರೇ ಶಾಕ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಪೋಷಕರಿಬ್ಬರು ಮಗುವಿಗೆ ಉಸಿರಾಟದ ತೊಂದರೆಯಿಂದಾಗಿ ಮಗುವನ್ನು ಕೊಟ್ಟಾಯಂನ ಆಸ್ಪತ್ರೆಗೆ ದಾಖಲಿಸಿದ್ದರು. ಪರೀಕ್ಷಿಸಿದ್ದ ವೈದ್ಯರು ಸ್ಕ್ಯಾನಿಂಗ್ ನಡೆಸಿದ್ದರು. ಸ್ಕ್ಯಾನಿಂಗ್ ವರದಿಯಲ್ಲಿ ಮಗುವಿನ ಶ್ವಾಸಕೋಶದಲ್ಲಿ ವಸ್ತು ಇರುವುದು ಕಂಡು ಬಂದಿದೆ. ಸೂಕ್ಷ್ಮವಾಗಿ ಅದನ್ನು ಗಮನಿಸಿದಾಗ ಅದು ಎಲ್‌ಇಡಿ ಬಲ್ಬ್ ಎಂದು ಗೊತ್ತಾಗಿದೆ. ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಿದ ವೈದ್ಯರು, ಬ್ರಾಂಕೋಸ್ಕೋಪಿಕ್ ಮೂಲಕ ಹೊರ ತೆಗೆದಿದ್ದಾರೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಮಗು ಸಾಮಾನ್ಯವಾಗಿ ಆಟಿಕೆಗಳೊಂದಿಗೆ ಆಟವಾಡುತ್ತದೆ. ಅದನ್ನು ಪಾಲಕರು ಗಮನಿಸಿಲ್ಲ. ಉಸಿರಾಟದ ತೊಂದರೆಗೆ ಶೀತ ಕಾರಣ ಎಂದು ಅವರು ಭಾವಿಸಿದ್ದಾರೆ. ಕೊನೆಗೂ ಮಗು ಬದುಕಿದ್ದು, ಪಾಲಕರು ನಿಟ್ಟುಸಿರು ಬಿಟ್ಟಿದ್ದಾರೆ.