ಕ್ಯಾಮರಾಗೆ ಪೋಸ್ ಕೊಟ್ಟ ಚಿರತೆಗಳು Saaksha tv
ಬಂಡೀಪುರ : ಒಂದೇ ಮರದಲ್ಲಿ ಕೂತು ಕ್ಯಾಮರಾಗೆ ಪೋಸ್ ಕೊಟ್ಟ ಚಿರತೆಗಳು. ಇದು ಬಂಡೀಪುರ ಅಭಯಾರಣ್ಯದಲ್ಲಿ ನಡೆದಿದ್ದು, ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಚಿರತೆಗಳನ್ನು ಸೆರೆ ಹಿಡದಿದ್ದಾರೆ. ಇದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮರವೊಂದರ ಮೇಲೆ ಮೂರು ಚಿರತೆಗಳು ಒಟ್ಟಾಗಿ ಕುಳಿತು ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮರಾಗೆ ಪೋಸ್ ನೀಡಿದ್ದು ಪ್ರವಾಸಿಗರು ಪುಲ್ ಖುಷ್ ಆಗಿದ್ದಾರೆ. ಮೂರು ಚಿರತೆಗಳು ಒಟ್ಟಾಗಿ ಕುಳಿತು ವಿರಮಿಸುತ್ತಿರುವ ಈ ಅಪರೂಪದ ದೃಶ್ಯ ವನ್ಯಜೀವಿ ಛಾಯಾಗ್ರಾಹಕ ಅಬ್ದುಲ್ ಅಜೀಜ್ ಎಂಬುವರ ಕ್ಯಾಮರಾದಲ್ಲಿ ಸೆರೆಯಾಗಿದೆ. ಮರವೊಂದರ ಕೊಂಬೆ ಮೇಲೆ ಕುಳಿತ ಮೂರು ಚಿರತೆಗಳು ಸಫಾರಿಗರನ್ನೇ ದಿಟ್ಟಿಸಿ ನೋಡುತ್ತಿರುವಂತಹ ದೃಶ್ಯ ಇದಾಗಿದೆ.