ಟಿ10 ಲೀಗ್ ನಲ್ಲಿ ಲಿವಿಂಗ್ ಸ್ಟೋನ್ ಅಬ್ಬರ
ಯುಎಇಯಲ್ಲಿ ನಡೆಯುತ್ತಿರುವ ಟಿ10 ಲೀಗ್ ನಲ್ಲಿ ಶನಿವಾರ ನಡೆದ ನಾರ್ಥನ್ ವಾರಿಯರ್ಸ್ ಮತ್ತು ಟೀಮ್ ಅಬುಧಾಬಿ ನಡುವೆ ಪಂದ್ಯದಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ಅಬ್ಬರಿಸಿದ್ದಾರೆ.
ಲಿವಿಂಗ್‍ಸ್ಟೋನ್ 23 ಎಸೆತಗಳಲ್ಲಿ 2 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 68 ರನ್ ಚಚ್ಚಿದ್ದಾರೆ.
ಇನ್ನು ಈ ಪಂದ್ಯವನ್ನು ಅಬುಧಾಬಿ 21 ರನ್‍ಗಳಿಂದ ಗೆದ್ದುಕೊಂಡಿತು.
ಮೊದಲು ಬ್ಯಾಟ್ ಮಾಡಿದ ಅಬುಧಾಬಿ ನಿಗದಿತ 10 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು.
ಈ ಮೊತ್ತವನ್ನು ಚೇಸ್ ಮಾಡಲೋರಟ ನಾರ್ಥನ್ ವಾರಿಯರ್ಸ್ 10 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು.
ನಾರ್ಥನ್ ವಾರಿಯರ್ಸ್ ಪರ ರೋವ್ಮನ್ ಪೊವೆಲ್ 42 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದರು.
ಕೆನ್ನರ್ ಲೂಯಿಸ್ 35 ರನ್ ಗಳಿಸಿದರು. ಅಬುಧಾಬಿ ತಂಡದ ಪರ ನವೀನ್ ಉಲ್ ಹಕ್, ಡ್ಯಾನಿ ಬ್ರಿಗ್ಸ್ ಮತ್ತು ಮಚೆರ್ಂಟ್ ಡಿ ಲೌಂಜ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.