ಟ್ವಿಟ್ಟರ್ ನಲ್ಲಿ #LieLikeModi ಟ್ರೆಂಡಿಂಗ್ : ಕಾರಣವೇನು ಗೊತ್ತಾ..?
ನವದೆಹಲಿ : ನನ್ನ ಜೀವನದ ಮೊದಲ ಪ್ರತಿಭಟನೆಗಳಲ್ಲಿ ಬಾಂಗ್ಲಾ ವಿಮೋಚನಾ ಪರ ಹೋರಾಟವೂ ಒಂದು. ನಾನು 20ರ ಹರೆಯಲಿದ್ದಾಗ ಬಾಂಗ್ಲಾದೇಶ ಸ್ವಾತಂತ್ರ್ಯಕ್ಕಾಗಿ ಸ್ನೇಹಿತರ ಜೊತೆ ಪ್ರತಿಭಟನೆ ನಡೆಸಿದ್ದೆ.
ಆದ ನನಗೆ ಜೈಲಿಗೆ ಹೋಗುವ ಸಂದರ್ಭವೂ ಬಂದಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಶುಕ್ರವಾರ ಬಾಂಗ್ಲಾದ 50ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಈ ಸಂದರ್ಭ ಅವರು ಮಾಡಿರುವ ಭಾಷಣ ನಗೆಪಾಟಲಿಗೀಡಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗಳ ಮಳೆಯೇ ಸುರಿಯುತ್ತಿದೆ
ಮೋದಿ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಟ್ವಿಟ್ಟರ್‍ನಲ್ಲಿ “#LieLikeModi” ಹ್ಯಾಷ್‍ಟ್ಯಾಗ್ ಕೂಡ ಸೃಷ್ಟಿಯಾಗಿದ್ದು, “ಬಾಲ ನರೇಂದ್ರ ಮೋದಿ” ಎಂದು ಹಲವು ಟ್ರೋಲ್ ಗಳು ಹುಟ್ಟಿಕೊಂಡಿವೆ
ಅಲ್ಲದೆ ನೆಟ್ಟಿಗರು ಭಿನ್ನ ವಿಭಿನ್ನ ಮಿಮ್ ಗಳ ಮೂಲಕ ಮೋದಿ ಹೇಳಿಕೆ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ.
ಅದರಲ್ಲೂ ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ “ಅಪ್ಪಿತಪ್ಪಿಯೂ ಮೋದಿ ಅವರು ಸತ್ಯ ಹೇಳುವುದಿಲ್ಲ” ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
