ಈ ಜೀವನದಲ್ಲಿ ಹೆಲ್ಮೆಟ್ ಮುಖ್ಯ ಅದರಲ್ಲೂ ಎರಡು ರೀತಿ ಹೆಲ್ಮೆಟ್ ಗಳು ತುಂಭಾ ಮುಖ್ಯ.
ಒಂದು ಜೀವ ಉಳಿಸೋದಾದರೆ ಇನ್ನೊಂದು ಇನ್ನೊಂದು ಜೀವ ಭೂಮಿಗೆ ಬರದಂತೆ ತಡೆಯುವುದು. ಅವುಗಳಲ್ಲಿ ಈಗ ಜೀವ ಉಳಿಸೋದರ ಬಗ್ಗೆ ಕೆಲವು ಮಾಹಿತಿ ನಿಮಗಾಗಿ.
ಹೆಲ್ಮೇಟ್ ಹೇಗಿರ ಬೇಕು ಎನ್ನುವುದನ್ನ ನಾವು ಎಷ್ಟೋಸಾರಿ ಗಮನಿಸೊದೆ ಇಲ್ಲ .
ಆದರೆ ನೆನಪಿನಲ್ಲಿ ಇಡಬೇಕಾದ ಕೇಲವಿ ಅಂಶಗಳು ಹೀಗಿವೆ.
ಸಾಮಾನ್ಯವಾಗಿ ನಾವು ಹೆಲ್ಮೇಟ್ ತೆಗೆದುಕೊಳ್ಳುವಾಗ ನಾವು ಡಾಟ್ ಮತ್ತು ECE22,05 ಎರಡೂ ಪ್ರಮಾಣೀಕರಣವನ್ನು ಹೊಂದಿರುವ ಹೆಲ್ಮೆಟ್ಗಳುನ್ನು ತಗೆದು ಕೊಳ್ಳಬೇಕು.
ಆದರೆ ಸಾಮಾನ್ಯವಾಗಿ ಒಂದು ಪ್ರಮಾಣೀಕರಣವನ್ನು ಹೊಂದಿರುವ ಹೆಲ್ಮೆಟ್ಗಿಂತ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.
ಕೆಲವು ಭಾರಿ ಹೆಲ್ಮೆಟ್ ತಯಾರಿಸುವ ಕಂಪನಿಗಳು ತಮ್ಮದೇ ಆದ ಪ್ರಮಾಣೀಕರಣವನ್ನು ಬಳಸುವುದರಿಂದ ಇಲ್ಲಿ ನಾವು ಪ್ರಮುಖವಾಗಿ ತಯಾರಿಕ ಕಂಪನಿಗಳ ಪ್ರಖ್ಯಾತಿಯನ್ನು ಗಮನಿಸಬೇಕಾಗುತ್ತದೆ.
ಯುಎಸ್ಎಯ SNELL ಮತ್ತು ಬ್ರಿಟನ್ನ SHARP ಸಂಸ್ಥೆಗಳು ವೀಡುವಂತಹ ರೇಟಿಂಗ್ ಅನ್ನು ನೊಡುವುದು ಸೂಕ್ತ.
ತಲೆಗೆ ಸರಿಹೊಂದುವ ಹೆಲ್ಮೆಟ್
ನಾವು ಧರಿಸುವ ಹೆಲ್ಮೆಟ್ ಯಾವ ರೀತಿ ಇರಬೇಕು ಎನ್ನುವುದರ ೫ ಲಕ್ಷಣಗಳು ಹೀಗಿರಲಿ.
ಧರಿಸಿ ನೋಡುವುದು
ಒಮ್ಮೆ ಖರೀಧಿಸುವ ಮೂದಲು ಹೆಲ್ಮೆಟ್ ಅನ್ನು ಧರಿಸಿ ನೋಡಿ.
ನಿಮಗೆ ಸರಿಹೊಂದುತ್ತದೆಯೇ ಎನ್ನುವುದನ್ನು ಖಚಿತ ಪಡಿಸಿಕೋಳ್ಳಿ.
ನಿಮಗೆ ಸುಲಭವಾಗಿ ತಲೆಗೆ ಹಾಕಿಕೊಳ್ಳಲು ಸಾಧ್ಯವಾಗುತ್ತಿದ್ದರೆ ನಿಮ್ಮ ತಲೆಗೆ ದೊಡ್ಡದಾಗಬಹುದು.
ತಲೆಗೆ ಸರಿಯಾಗಿ ಕೂರದೆ ಹೋದರೆ ಆ ಹೆಲ್ಮೆಟ್ ಚಿಕ್ಕದಾಗುತ್ತದೆ .
ನೀವು ಹೆಲ್ಮೆಟ್ ಅನ್ನು ಹಾಕಿಕೊಂಡಾಗ ಅದು ಸರಿಯಾಗಿ ಕೂತು .ಏನೂ ಸಮಸ್ಯೆ ಆಗದು ಎಂದು ತಿಳಿದಲ್ಲಿ ಅದು ಸರಿಯಾಗಿದೆ ಎಂದು ಅರ್ಥ.
ಒತ್ತಡ ಬಿಂದುಗಳ ಪರೀಕ್ಷೆ
ಹೆಲ್ಮೆಟ್ ತೆಗೆದ ತಕ್ಷಣ, ಹಣೆಯ ಮತ್ತು ಕೆನ್ನೆಗಳ ಚರ್ಮದ ಬಣ್ಣವನ್ನು ಗಮನಿಸಿ.
ಚರ್ಮ ಕೆಂಪಾಗಿದ್ದರೆ ಅದು ಒತ್ತಡ ಬಿಂದುವನ್ನು ಸೂಚಿಸುತ್ತದೆ.
ಇವುಗಳನ್ನು ಸರಿಯಾಗಿ ಗಮನಿಸಲಿಲ್ಲದ್ದರೆ ಹೆಲ್ಮೆಟ್ ಧರಿಸಿದ ನಂತರ ಇವುಗಳು ತಲೆನೋವು ಉಂಟುಮಾಡುತ್ತದೆ.
ಸುತ್ತಳತೆ
ಹೆಲ್ಮೆಟ್ ಖರೀದಿಸುವಾಗ ಗಾತ್ರ ಮತ್ತು ಅದು ನಿಮ್ಮ ತಲೆಗೆ ಫಿಟ್ ಆಗುತ್ತದೆಯೇ ಎನ್ನುವುದನ್ನು ಗಮನಿಸಿ .
ನಿಮ್ಮ ತಲೆಯ ಗಾತ್ರಕ್ಕಿಂತ ದೊಡ್ಡದಾದ ಅಥವಾ ತೀರಾ ಕಷ್ಟದಲ್ಲಿ ತಲೆಗೆ ಕೂರುತ್ತಿದೆ ಎಂದಲ್ಲಿ ಆ ಹೆಲ್ಮೆಟ್ ತ್ಯಜಿಸಿ ಆದಷ್ಟು ಹೆಲ್ಮೆಟ್ಗಳು ಆರಾಮದಾಯಕವಾಗಿರಲಿ.
ಧಾರಣ ಪರೀಕ್ಷೆ
ಹೆಲ್ಮೆಟ್ನ ಕುತ್ತಿಗೆ ಪಟ್ಟಿಯನ್ನು ಬಿಗಿಯಾಗಿ ಹಾಕಿಕೊಂಡು ಹೆಲ್ಮೆಟ್ ತೆಗೆಯಲು ಪ್ರಯತ್ನಿಸಿ, ಅದು ಸುಲಭವಾಗಿ ಹೊರಬಂದರೆ, ಖಂಡಿತ ಆ ಹೆಲ್ಮೆಟ್ ದೊಡ್ಡದಾಗಿರುತ್ತದೆ ಎಂದು ಅರ್ಥ
ಮೇಲೆ-ಕೆಳಗೆ ಹಾಗೂ ಪಕ್ಕ ಚಲನೆಯ ಪರೀಕ್ಷೆ
ಹೆಲ್ಮೆಟ್ ಧರಿಸಿದ ನಂತರ ಮೇಲೆ-ಕೆಳಕೆ, ಅಕ್ಕ-ಪಕ್ಕ ತಲೆಯನ್ನು ತಿರುಗಿಸಿ ಚಲನೆಯ ಪರೀಕ್ಷೆಯನ್ನು ಮಾಡಿ.
ಹೀಗೆ ತಿರುಗಿದಾಗ ಹೆಲ್ಮೆಟ್ ಒಳಗಿನ ಕೆನ್ನೆಯ ಪ್ಯಾಡ್ ನಿಮ್ಮ ಕೆನ್ನೆಗೆ ತಗುಲುತ್ತಿದೆಯೇ, ಒತ್ತುತ್ತಿದೆಯೇ ಎನ್ನುವುದನ್ನು ತಿಳಿಯಿರಿ.
ಜೊತೆಗೆ ಕುತ್ತಿಗೆ ಸುತ್ತಲು ಅದು ಸರಿಯಾಗಿ ಕೂರುತ್ತಿದೆಯೇ ಎನ್ನುವುನ್ನು ಗಮನಿಸಿ.
ಹೆಲ್ಮೆಟ್ ವಿಧಗಳು
ಹೆಲ್ಮೆಟ್ ನಲ್ಲಿ ಎರಡು ಪ್ರಕಾರಗಳು
– ಅರ್ಧ ಹೆಲ್ಮೆಟ್ ಮತ್ತು ¾ ಹೆಲ್ಮೆಟ್.
ಮಾಡ್ಯುಲರ್ ಹೆಲ್ಮೆಟ್,