ನಾವು ಮಲಗಿದಾಗ ನಮ್ಮ ಚರ್ಮವೂ ಸಹ ನಮ್ಮೊಂದಿಗೆ ವಿಶ್ರಾಂತಿ ಪಡೆಯುತ್ತದೆ .
ಹಾಳಾದ ಭಾಗವನ್ನು ಸರಿಪಡಿಸುತ್ತದೆ. ಚರ್ಮವನ್ನು ಪುನರುತ್ಪಾದಿಸುತ್ತದೆ. ಹಾಗಾಗಿ ಬೆಳಗ್ಗೆಗಿಂತ ರಾತ್ರಿ ಸಮಯದಲ್ಲಿ ಸುಂದರವಾದ, ಹೊಳೆಯುವ ಮತ್ತು ಆರೋಗ್ಯಕರ ಚರ್ಮಕ್ಕಾಗಿ ಪರಿಪೂರ್ಣ ರಕ್ಷಣೆಯ ಬಹಳ ಮುಖ್ಯವಾಗಿರುತ್ತದೆ.
ಕೆಲವುಟಿಪ್ಸಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಈ ರೀತಿಯ ಚರ್ಮದ ಮೇಲ್ಪದರದ ಹಾನಿ ಸೌಂದರ್ಯದ ಹಾನಿ ಆಗುವುದನ್ನು ತಡಿಗಟ್ಟ ಬಹುದಹುದಾಗಿದೆ.
ಮೇಕಪ್ ರಿಮೂ ಮಾಡಲು ಮೊದಲು ಚನ್ನಾಗಿ ಮುಖತೊಳೆಯಿರಿ.
ನಿಮ್ಮ ಮೇಕ್ ಅಪ್ ಅನ್ನು ತಗೆಯಿರಿ . ನಿಮ್ಮ ಕಣ್ಣುಗಳ ಮೇಲಿನ ಕಾಡಿಗೆ , ತುಟಿಗಳ ಮೇಲೆ ಲಿಪ್ ಸ್ಟಿಕ್ ಅನ್ನು ತಗೆಯಿರಿ.
ಕ್ಲೆನ್ಸರ್ ಬಳಸಿ
ನಿಮ್ಮ ಮುಖವನ್ನು ಸೌಮ್ಯವಾದ ಮುಖದ ಕ್ಲೆನ್ಸರ್ ಮೂಲಕ ತೊಳೆಯಿರಿ.
ಇದು ನಿಮ್ಮ ಚರ್ಮದಲ್ಲಿನ ಕೊಳಕು ಮತ್ತು ಮಾಲಿನ್ಯವನ್ನು ಒಮ್ಮೆಲೇ ತೆಗೆದು ಹಾಕುತ್ತದೆ.
ನೈಟ್ ಕ್ರೀಮ್ ನ ಬಳಕೆ
ನೈಟ್ ಕ್ರೀಮ್ ಬಳಕೆಯಿಂದ ಸತ್ವಗಳು, ತೈಲಗಳು, ಸಾರಭೂತ ತೈಲಗಳು, ಅಲೋ ವೆರಾ, ಎ ಎಚ್ ಎ ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಹಲವಾರು ಬಗೆಯ ಇತರ ಪದಾರ್ಥಗಳೊಂದಿಗೆ ಚರ್ಮದ ಮೇಲಿನ ಗೆರೆಗಳು ಮತ್ತು ಸುಕ್ಕುಗಳನ್ನು ಹೋಗಲಾಡಿಸುತ್ತವೆ.
ಕಣ್ಣಿನ ಆರೈಕಗೆ ನಿರ್ಲಕ್ಷ್ಯ ಮಾಡಬೇಡ
ಸುಂದರ ಕಣ್ಣುಗಳು ಮುಖದ ಅಂದವನ್ನು ಹೆಚ್ಚು ಮಾಡುತ್ತವೆ .
ಕಣ್ಣಿನ ಅಂದವನ್ನು ಹೆಚ್ಚಿಸಲು ಕಾಡಿಗೆಯನ್ನು ಹಚ್ಚಿರುತ್ತೀರಿ.
ರಾತ್ರಿಯ ಮಲಗುವ ಸಮಯದಲ್ಲಿ ಕಣ್ಣಿನ ಪ್ರದೇಶದ ಸುತ್ತಲೂ ಐ ಕ್ರೀಮ್ ಹಚ್ಚಿ ವಿಶ್ರಾಂತಿ ಪಡೆಯಿರಿ.
ಹೀಗೆ ಮಾಡುವುದರಿಂದ ಕಣ್ಣುಗಳ ಸುತ್ತಲಿನ ಚರ್ಮವನ್ನು ಪುನಃ ಚೇತನ ಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ಕಣ್ಣಿನ ಸುತ್ತಲಿನ ಕಪ್ಪು ವೃತ್ತಗಳನ್ನು .ಡಾರ್ಕ್ ಸರ್ಕಲ್ ಗಳನ್ನು ಮತ್ತು ಪಫಿನೆಸ್ ಅನ್ನು ಸಹ ಕಡಿಮೆ ಮಾಡುತ್ತದೆ.
ದಣಿದ ಕಣ್ಣುಗಳಿಗೆ ತಂಪನ್ನೂ ನೀಡಿ ಕಣ್ಣುಗಳ ಉರಿಯನ್ನು ಸಹ ಶಮನ ಗೊಳಿಸುತ್ತದೆ.
ತುಟಿಗಳ ಆರೈಕೆ ಹೀಗಿರಲಿ
ಮೃದುವಾದ ತುಟಿಗಳನ್ನು ಹೊಂದಲು ರಾತ್ರಿ ಮಲಗುವ ಸಮಯದಲ್ಲಿ ಕೆಲವು ದಪ್ಪ ತರನಾದ ಆರ್ಧ್ರಕ ಕ್ರೀಮ್ ಸಾಮಾನ್ಯವಾಗಿ ಬೊರೊಲಿನ್ ವ್ಯಾಸಲಿನ ಹಚ್ಚಿ.
ಕೇವಲ 10 ನಿಮಿಷಗಳಲ್ಲಿ ಚಮತ್ಕಾರವನ್ನು ಉಂಟು ಮಾಡುತ್ತದೆ. ಅಂದರೆ ಅದು ನೀಡುವ ಪರಿಣಾಮಕ್ಕೆ ಸಾಟಿಯಿಲ್ಲ. ತ್ವಚೆಯು ನಯವಾದ, ಮೃದುವಾದ, ಸ್ಪಷ್ಟವಾದ, ತಾರುಣ್ಯದ ಮತ್ತು ಮುಖ್ಯವಾಗಿ ಆರೋಗ್ಯಕರವಾದ ಚರ್ಮವಾಗಿ ಹೊಂದಬಹುದಾಗಿದೆ