Liger: ಲೈಗರ್ ಚಿತ್ರಕ್ಕೆ ಭಾರಿ ಸಂಭಾವನೆ ಪಡೆದ ವಿಜಯ್ ದೇವರಕೊಂಡ..
ಚಿತ್ರರಂಗದಲ್ಲಿ ಗಾಡ್ ಫಾದರ್ ಇಲ್ಲದೆ ಹಂತ ಹಂತವಾಗಿ ಬೆಳೆದು ಬಂದ ವ್ಯಕ್ತಿ ವಿಜಯ್ ದೇವರಕೊಂಡ. ‘ಅರ್ಜುನ್ ರೆಡ್ಡಿ’, ‘ಗೀತಾ ಗೋವಿಂದಂ’ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ನಿನ್ನೆಯಷ್ಟೆ ಅವರ ‘ಲೈಗರ್’ ಚಿತ್ರ ಬಿಡುಗಡೆಯಾಗಿದೆ.
ಮೈಕ್ ಟೈಸನ್, ರಮ್ಯಾ ಕೃಷ್ಣ, ವಿಶು ರೆಡ್ಡಿ, ರೋನಿತ್ ರಾಯ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ‘ಲೈಗರ್’ ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ ಚಿತ್ರಕ್ಕೆ ಸಂಬಂಧಿಸಿದ ಕುತೂಹಲಕಾರಿ ಸುದ್ದಿಯೊಂದು ಇಂಡಸ್ಟ್ರಿ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
‘ಲೈಗರ್’ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ತೆಗೆದುಕೊಂಡ ಸಂಭಾವನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ವಿಜಯ್ ಚಿತ್ರಕ್ಕೆ ಅಂದಾಜು ರೂ. 35 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅನನ್ಯಾ ಪಾಂಡೆ ರೂ.3 ಕೋಟಿ, ರೋನಿತ್ ರಾಯ್ ರೂ. 1.5 ಕೋಟಿ, ರಮ್ಯಾ ಕೃಷ್ಣ ಕೋಟಿ ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಮಾರ್ಷಲ್ ಆರ್ಟ್ಸ್ ಹಿನ್ನೆಲೆಯಲ್ಲಿ ಈ ಸಿನಿಮಾ ನಿರ್ಮಿಸಲಾಗಿದೆ. ಕರೀಂನಗರದ ಯುವಕನೊಬ್ಬ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್ ಆಗುತ್ತಾನೆ ಎಂಬುದೇ ಚಿತ್ರದ ಕಥೆ.
‘ಲೈಗರ್’ ಅನ್ನು ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಭರ್ಜರಿ ವ್ಯಾಪಾರ ಮಾಡಿದೆ.