ಕೊಪ್ಪಳ: ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಲು ಶುರು ಮಾಡಿದ್ದಾನೆ. ಈ ಮಧ್ಯೆ ಹಲೆವೆಡೆ ಅನಾಹುತಗಳು ಬೆಳಕಿಗೆ ಬರುತ್ತಿವೆ. ದೇವಸ್ಥಾನಕ್ಕೆ ಸಿಡಿಲು ಬಡಿದಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮ ಗೋಪುರ ಕುಸಿದಿದೆ. ಜಿಲ್ಲೆಯ ಹಲವೆಡೆ ಗುಡುಗು ಹಾಗೂ ಸಿಡಿಲಿನ ಮಳೆಯಾಗಿದೆ. ಈ ವೇಳೆ ತಾಂಡಾದಲ್ಲಿರುವ ತುಳಜಾಭವಾನಿ ದೇವಸ್ಥಾನದ ಗೋಪುರಕ್ಕೆ ಶನಿವಾರ ಸಂಜೆ ಸಿಡಿಲು ಬಡಿದಿದೆ. ಇದರಿಂದಾಗಿ ಗೋಪುರದ ಮೇಲ್ಭಾಗ ಸಂಪೂರ್ಣ ಕುಸಿದಿದೆ. ಗೋಪುರ ಕುಸಿದಿದ್ದರಿಂದಾಗಿ ಜನರು ಅಪಶಕುನ ಇದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.