ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಕಂಬಿ ಎಣಿಸುತ್ತಿರುವ ನಟಿ ಸಂಜನಾ ಗಲ್ರಾನಿಯ ಅಕ್ರಮ ವ್ಯವಹಾರಗಳು ಬಗೆದಷ್ಟೂ ಹೊರಬರುತ್ತಿವೆ.
ಸಾಮಾನ್ಯ ನಟಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಸಂಜನಾ, ಕನ್ನಡದಲ್ಲಿ ಅಭಿನಯಿಸಿದ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಆದರೆ, ಸಂಜನಾ ಉದ್ಯಮಿಗಳು, ಮಾಲ್‍ಗಳ ಮಾಲೀಕರಿಗೇ ಬಡ್ಡಿಗೆ ಸಾಲ ಕೊಡುವಷ್ಟರ ಮಟ್ಟಿಗೆ ಬೆಳೆದಿದ್ದಾಳೆ ಎನ್ನುವ ಅಚ್ಚರಿಯ ಸಂಗತಿ ಇಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕನ್ನಡದ `ಗಂಡ ಹೆಂಡತಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಸಂಜನಾ, ತೆಲುಗು, ಮಲಯಾಳಂ ಸೇರಿದಂತೆ 50 ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಹಾಗಾದರೆ, 50 ಚಿತ್ರಗಳಲ್ಲಿ ನಟಿಸಿ ಇಷ್ಟೊಂದು ಕೋಟ್ಯಾಂತರ ರೂ. ಹಣ ಸಂಪಾದನೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.
ಸಂಜನಾಗೆ ಪೋಷಕರಿಂದ ಬಂದ ಪಿತ್ರಾರ್ಜಿತ ಆಸ್ತಿ ಯಾವುದೂ ಇಲ್ಲ. ಆದರೆ, ಸಿನಿಮಾಗಳಿಂದಲೇ ಇಷ್ಟೊಂದು ಆದಾಯ ಹೇಗೆ ಗಳಿಸಿದರು ಎಂಬುದು ಈಗಲೂ ನಿಗೂಢವಾಗಿಯೇ ಇದೆ. ಈ ಬಗ್ಗೆ ಸಂಜನಾಳನ್ನು ಇಡಿ ಅಧಿಕಾರಿಗಳು ಕೇಳಿದ್ರೆ ಮೌನಕ್ಕೆ ಜಾರುತ್ತಿದ್ದಾಳಂತೆ.
ಉದ್ಯಮಿಗಳಿಗೆ ಸಾಲ ಕೊಡುತ್ತಿದ್ದ ಸಂಜನಾ, ಕೊಟ್ಟ ಬಡ್ಡಿ ಸಾಲ ವಾಪಸ್ ಬರದೇ ಇದ್ದರೆ, ಉದ್ಯಮಿಗಳ ಕೋಟಿ ಕೋಟಿ ಮೌಲ್ಯದ ಕಾರ್‍ಗಳನ್ನೇ ಅಬೇಸ್ ಮಾಡಿಕೊಂಡು ಬರುತ್ತಿದ್ದಳಂತೆ. ಜೊತೆಗೆ ಸಾಲಕ್ಕೆ ಕೊಟ್ಟ ಚೆಕ್‍ಗಳನ್ನು ಬ್ಯಾಂಕಿಗೆ ಹಾಕಿ ಬೌನ್ಸ್ ಮಾಡಿ ಸಾಲ ಕಟ್ಟುವಂತೆ ತಾಕೀತು ಮಾಡುತ್ತಿದ್ದಳಂತೆ. ಸಿಸಿಬಿ ಪೊಲೀಸರು ಸಂಜನಾ ಮನೆ ಮೇಲೆ ದಾಳಿ ಮಾಡಿದಾಗ ಸಿಕ್ಕ 10ಕ್ಕೂ ಚೆಕ್‍ಗಳು ಬಡ್ಡಿ ಬಂಗಾರಮ್ಮನ ಕಥೆ ಹೇಳುತ್ತಿವೆ.
ಇಷ್ಟೊಂದು ಹಣ ಮಾಡಿದ್ದು ಹೇಗೆ, ಡ್ರಗ್ಸ್‍ನಿಂದ ಹಣ ಮಾಡುತ್ತಿದ್ದಿರಾ, ಯಾರಿ ಯಾರಿಗೆ ಎಷ್ಟು ಮೊತ್ತದ ಸಾಲ ಕೊಟ್ಟಿದ್ದೀರಿ ಎಂದು ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನಮ್ಮ ಆಡಿಟರ್ ಕೇಳಿ ಹೇಳ್ತೀನಿ ಅಂತಿದ್ದಾಳಂತೆ. ಹೀಗಾಗಿ ಸಂಜನಾ ಉದ್ಯಮಿಗಳಿಗೆ ಕೋಟಿಗಟ್ಟಲೆ ಸಾಲ ಕೊಟ್ಟಿರುವ ಸಂಗತಿ ಇಡಿ ಅಧಿಕಾರಿಗಳ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.
ಸಂಜನಾ ಅಷ್ಟೇ ಅಲ್ಲ, ನಟಿ ರಾಗಿಣಿ ದ್ವಿವೇದಿ ಸಹ ಅಕ್ರಮವಾಗಿ ಕೋಟ್ಯಂತರ ರೂ. ಹಣ ಸಂಪಾದನೆ ಮಾಡಿದ್ದಾಳೆ ಎನ್ನಲಾಗಿದೆ. ಈಕೆಯೂ ಹಣವನ್ನು ಬೇರೆ ಬೇರೆ ಕಡೆ ಹೂಡಿಕೆ ಮಾಡಿದ್ದು, ರಾಗಿಣಿಯ ಅಕ್ರಮ ಆಸ್ತಿಪಾಸ್ತಿಗಳ ಬೆನ್ನು ಬಿದ್ದಿದ್ದಾರೆ ಇಡಿ ಅಧಿಕಾರಿಗಳು.
ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ
ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಕನಸು ಹೊತ್ತಿರುವ ನಾಡಿನ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಅನುಭವಿ ವೃತ್ತಿಪರರಿಗೆ ಕರ್ನಾಟಕ ರಾಜ್ಯ ಕಂದಾಯ...








