ಕೆರೆಯೊಂದರಲ್ಲಿ ರುಂಡವಿಲ್ಲದ ದೇಹ ಹಾಗೂ ಕೈಕಾಲು ಪತ್ತೆಯಾಗಿವೆ.
ಚೆನ್ನೈನ ಚೆಂಬರಂಬಕ್ಕಂ ಕೆರೆಯಲ್ಲಿ ಮೀನುಗಾರರು ಈ ರೀತಿ ಶವ ಕಂಡಿದ್ದಾರೆ. ಮೀನುಗಾರಿಕೆಗೆ ತೆರಳಿದ್ದಾಗ ಅವರು ಇವುಗಳನ್ನು ಕಂಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಿಶೀಲನೆ ನಡೆಸಿದಾಗ ಕಾಲು ಕತ್ತರಿಸಿದ ರೀತಿಯಲ್ಲಿ ದೇಹ ಪತ್ತೆಯಾಗಿದೆ. ಈ ದೇಹ ಸುಮಾರು 30 ವರ್ಷ ವಯಸ್ಸಿನವರದ್ದಾಗಿದ್ದು, ಹೊಟ್ಟೆಯಲ್ಲಿ ಇರಿತದ ಗಾಯವಿದೆ ಎಂದು ತಿಳಿದು ಬಂದಿದೆ.
ಮೃತದೇಹದ ಗುರುತು ಸಿಗಬಾರದು ಎಂಬ ಕಾರಣಕ್ಕೆ ಬಂಡೆಗೆ ಕಟ್ಟಿ ಕೆರೆಗೆ ಎಸೆದಿದ್ದಾರೆ ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.