ಮೆಸ್ಸಿಯನ್ನ ಹೊತ್ತು ಮೆರೆಸಿ ಸಂಭ್ರಮಿಸಿದ ಅರ್ಜೆಂಟೀನಾ ಆಟಗಾರರು…
ಲಿಯೊನೆಲ್ ಮೆಸ್ಸಿ ಮತ್ತು ಅರ್ಜೆಂಟಿನಾ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಮೆಸ್ಸಿ ಅವರ ತಪ್ಪಸಿನ ಜೊತೆಗೆ ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆ ಫಲವಾಗಿ ಅರ್ಜೆಂಟಿನಾ ವಿಶ್ವಫುಟ್ಬಾಲ್ ಗೆದ್ದಿದೆ.
ಕ್ರೀಡಾಂಗಣದಲ್ಲಿ ಮೆಸ್ಸಿ ಹೊತ್ತು ಮೆರವಣಿಗೆ ಮಾಡಲಾಗಿದೆ. ಡ್ರೆಸ್ಸಿಂಗ್ ರೂಮ್ನ್ ನಲ್ಲಿ ಆಟಗಾರರು ಕೇಕೆ ಹಾಕಿದ್ದಾರೆ. ವಿಶ್ವ ಚಾಂಪಿಯನ್ ಅರ್ಜೆಂಟಿನಾ ತವರಿಗೆ ಬಂದಿಳಿದಾಗ ಇಡೀ ಅರ್ಜೆಂಟಿನಾ ಸಂಭ್ರಮದಲ್ಲಿ ಮುಳುಗಿತು.
ರಾಜಧಾನಿ ಬ್ಯೂನಸ್ ಐರಿಸ್ನಲ್ಲಿ ಲಕ್ಷಾಂತರ ಅಭಿಮಾನಿಗಳು ಸಂಭ್ರಮಿಸಿದರು. ಈ ಗೆಲುವು ಎಷ್ಟು ವಿಶೇಷ ಅನ್ನೋದನ್ನು ಅವರಿ ಸಂಭ್ರಮಾಚರಣೆಗಳೇ ಹೇಳುತ್ತಿವೆ. ಈ ಪೀಳಿಗೆಯ ಫುಟ್ಬಾಲ್ ಅಭಿಮಾನಿಗಳ ಪಾಲಿಗೆ ಮೆಸ್ಸಿ ದೇವರಾಗಿದ್ದಾರೆ. ಮೆಸ್ಸಿ ಅವರನ್ನು ಆಟಗಾರರು ಹೆಗಲ ಮೇಲೆ ಹೊತ್ತುಕೊಂಡು ಲೂಸೈಲ್ ಕ್ರೀಡಾಂಗಣದಲ್ಲಿ ಮೆರವಣಿಗೆ ಮಾಡಲಾಯಿತು.
ಅರ್ಜೆಂಟಿನಾ ತಂಡ ಲೂಸೈಲ್ ಕ್ರೀಡಾಂಗಣದಿಂದ ತಾನು ಉಳಿದುಕೊಂಡಿದ್ದ ಹೋಟೇಲ್ಗೆ ಆಗಮಿಸಲು ಆಯೋಜಕರು ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರು. ತೆರೆದ ವಾಹನದಲ್ಲಿ ಟ್ರೋಫಿ ಹಿಡಿದು ದೋಹಾದ ರಸ್ತೆಗಳ ಇಕ್ಕೆಲಗಲಕ್ಕೂ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸುತ್ತಾ ಆಟಗಾರರು ಹೋಟೇಲ್ಗೆ ತಲುಪಿದರು.
ತವರಿನಲ್ಲಿ ಸಂಭ್ರಮ: ಅರ್ಜೆಂಟಿನಾ ವಿಶ್ವಕಪ್ ಗೆಲುವಿಗಾಗಿ 36 ಕಾಯಬೇಕಾಯಿತು. ಈ ಪೀಳಿಗೆಯ ಫುಟ್ಬಾಲ್ ರಸಿಕರಿಗೆ ಈ ಅನುಭವ ಇದೇ ಮೊದಲು .ಅರ್ಜೆಂಟಿನಾದ ಬ್ಯೂನಸ್ ಐರಿಸ್
ಅಕ್ಷರಶಃ ಜನ ಸಾಗರದಲ್ಲಿ ಮುಳುಗಿತು. ಜನ ಮಹಾ ಗೆಲುವನ್ನು ಕುಣಿದು, ಕುಡಿದು ಕುಪ್ಪಳಿಸಿದರು. ಕಟ್ಟಡಗಳು ಕಂಬಗಳ ಮೇಲೆ ಮೆಸ್ಸಿ ಮೆಸ್ಸಿ ಎಂದು ಕೂಗಿದರು. ಮೆಸ್ಸಿಯ ತವರೂರು ರೊಸಾರಿಯೋದಲ್ಲೂ ಖುಷಿಯ ಅಲೆಯಲ್ಲಿ ತೇಲಾಡಿ ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
lionel messi: Argentina players celebrating winnig worldcup