Liz Truss | ಭಾರತದ ರಿಷಿಗೆ ಸೋಲು – ಲಿಜ್ ಟ್ರಸ್ ಗೆ ಬ್ರಿಟನ್ ಪ್ರಧಾನಿ ಗದ್ದುಗೆ
ಲಂಡನ್ : ಬ್ರಿಟನ್ ನ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಅವರು ಆಯ್ಕೆಗೊಂಡಿದ್ದಾರೆ.
ಪ್ರಧಾನಿ ಹುದ್ದೆ ಚುನಾವಣೆಯ ಅಂತಿಮ ಸುತ್ತಿನಲ್ಲಿ ಭಾರತ ಮೂಲದ ರಿಷಿ ಸುನಾಕ್ ಅವರಿಗೆ ಸೋಲಾಗಿದ್ದು, ಲಿಜ್ ಟ್ರಸ್ ಅವರು ಗೆಲುವು ಸಾಧಿಸಿದ್ದಾರೆ.
ಅಂತಿಮ ಸುತ್ತಿನಲ್ಲಿ ಲಿಜ್ ಟ್ರಸ್ 81,326 ಮತಗಳೊಂದಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ರೆ, ರಿಷಿ ಸುನಕ್ 60,399 ಮತಗಳೊಂದಿಗೆ ಪರಾಭವಗೊಂಡರು.

ಇದರೊಂದಿಗೆ ಬ್ರಿಟನ್ ನ ಮೂರನೇ ಮಹಿಳಾ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆಗೊಂಡಿದ್ದಾರೆ.
ಬ್ರಿಟನ್ ಪ್ರಧಾನಿ ಸ್ಥಾನದಿಂದ ಬೋರಿಸ್ ಜಾನ್ಸನ್ ಕೆಳಗಿಳಿದ ಬಳಿಕ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಅದಕ್ಕೆ ಇದೀಗ ಉತ್ತರ ಸಿಕ್ಕಿದೆ. Liz Truss to become UK’s next prime minister