ಗುಜರಾತ್ ಮತದಾರ ಪಟ್ಟಿಯಿಂದ ಎಲ್.ಕೆ ಅಡ್ವಾಣಿ ಔಟ್- ಇನ್ಮೇಲೆ ದೆಹಲಿನೇ ಖಾಯಂ.. ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ 92 ವರ್ಷದ ಅಡ್ವಾಣಿ ಗುಜರಾತ್ ನೊಂದಿಗಿನ ರಾಜಕೀಯ ಸಂಬಂಧವನ್ನ ಕಡಿದುಕೊಂಡಿದ್ದಾರೆ. ಮೊನ್ನೆಯಷ್ಟೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಡ್ವಾಣಿ ಮತ ಚಲಾಯಿಸೋ ಮೂಲಕ ತಮ್ಮ ಮತ ಕ್ಷೇತ್ರವನ್ನ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದರಿಂದ ಅವರ ಮತದಾನದ ಕ್ಷೇತ್ರ ಗುಜರಾತ್ ನಿoದ ದೆಹಲಿಗೆ ಬದಲಾಯಿಸಿಕೊಂಡಿದ್ದಾರೆ. 1991ರಿಂದಲೂ ಗುಜರಾತ್ ನ ಮತದಾರರಾಗಿದ್ದ ಇವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಮೊದಲಿಗೆ ಗುಜರಾತ್ ರಾಜ್ಯದ ಅಹಮದಾಬಾದ್ ನ ಜಮಲ್ಪುರ-ಖಾಡಿಯಾ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದ ಅಡ್ವಾಣಿ, ಸದ್ಯ ದೆಹಲಿ ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಿದ್ದು, ಅವರ ಹೆಸರನ್ನು ಗುಜರಾತ್ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇನ್ನೂ ಮತ ಚಲಾಯಿಸಲು ಅಡ್ವಾಣಿ ಅವರು ನವದೆಹಲಿಯನ್ನು ತಮ್ಮ ಖಾಯಂ ನಿವಾಸವಾಗಿ ಉಲ್ಲೇಖಿಸಿದ್ದಾರೆ. ಈ ಮೂಲಕ ಗುಜರಾತ್ ನೊಂದಿಗಿನ ತಮ್ಮ ಸುದೀರ್ಘ ರಾಜಕೀಯ ಪಯಣಕ್ಕೆ ಅಂತ್ಯವಾಡಿದ್ದಾರೆ.
ಬೆಂಗಳೂರು ಕರಗ: “ನಿಮಗೆ ಕೊಡಲು ಯೋಗ್ಯತೆ ಇಲ್ಲ ಅಂದ್ರೆ ಹೇಳಿ, “ನಾವು ನಮ್ಮದೇ ದುಡ್ಡಿನಿಂದ ಕರಗ ನಡೆಸುತ್ತೇವೆ,”; ಬೆಂಗಳೂರು ಕರಗ ಸಮಿತಿ ತೀವ್ರ ಆಕ್ರೋಶ
ಬೆಂಗಳೂರು ಕರಗ ಮಹೋತ್ಸವ, ಇತಿಹಾಸ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ಉತ್ಸವ, ಈ ವರ್ಷ ಸರ್ಕಾರದ ಅನುದಾನದ ವಿಷಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಮುಜರಾಯಿ ಇಲಾಖೆಯಿಂದ ಈ ಉತ್ಸವಕ್ಕಾಗಿ ಹಣ...