ಬೆಂಗಳೂರು : ಜಿಎಸ್ಟಿ ನಷ್ಟ ತುಂಬಿ ಕೊಡುವುದು ಅಸಾಧ್ಯವೆಂದು ಕೈಚೆಲ್ಲಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡು ಮಾದರಿಯಲ್ಲಿ ಸಾಲ ಪಡೆಯಲು ರಾಜ್ಯಗಳಿಗೆ ಅವಕಾಶ ನೀಡಿದೆ. ಇದಕ್ಕೆ ಬಿಜೆಪಿ ಆಡಳಿತವಿಲ್ಲದ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿದ್ದರೇ ರಾಜ್ಯ ಬಿಜೆಪಿ ಸರ್ಕಾರ
ಕೇಂದ್ರ ನೀಡಿದ ಎರಡು ಅವಕಾಶಗಳ ಪೈಕಿ ‘ಆರ್ ಬಿಐನಿಂದ ಸಾಲ’ ಪಡೆಯುವ ಮೊದಲನೇ ಆಯ್ಕೆಗೆ ಸಮ್ಮತಿ ಸೂಚಿಸಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾತ ತನ್ನ ಆಯ್ಕೆ ಹಾಗೂ ಅದಕ್ಕೆ ಕಾರಣ ಏನೆಂಬುದನ್ನು ಸ್ಪಷ್ಟಪಡಿಸಿದೆ .
ರಾಜ್ಯ ಸರ್ಕಾರದ ಪ್ರತಿಕಾ ಹೇಳಿಕೆಯಲ್ಲಿ, “41ನೇ 1671 ಕೌನ್ಸಿಲ್ ಸಭೆ ಅನುಸಾರ ವಾಗಿ, ಜಿಎಸ್ ಟಿ ಪರಿಹಾರದ ಬಗ್ಗೆ ರಾಜ್ಯಗಳು ತಮ್ಮ ಆದ್ಯತೆ, ಅಭಿಪ್ರಾಯ ನೀಡಲು ಅನುವು ಮಾಡಿಕೊಡುವ ಉದ್ದೇಶದಿಂದ ಕೇಂದ್ರ 2 ಆಯ್ಕೆಗಳನ್ನು ನೀಡಿತ್ತು. ಜಿಎಸ್ಟಿ ಅನುಷ್ಠಾನದಿಂದ ಉಂಟಾಗುವ ಕೊರತೆ ನೀಗಿಸಿಕೊಳ್ಳಲು (ಆರ್ಬಿಐ ಮೂಲಕ) ಸಾಲ ಮಾಡುವುದು ಮೊದಲನೆಯದ್ದಾಗಿತ್ತು. ಕೊರೊನಾದಿಂದ ಉಂಟಾದ ನಷ್ಟ ಸೇರಿ ಜಿಎಸ್ಟಿ ಕೊರತೆ ನೀಗಿಸಿಕೊಳ್ಳಲು (ಮಾರುಕಟ್ಟೆಯಿಂದ) ಸಾಲ ಮಾಡುವ ಎರಡನೇ ಆಯ್ಕೆ ನೀಡಲಾಗಿತ್ತು. ಈ ಆಯ್ಕೆಗಳ ಪ್ರಕಾರ ಪರಿಹಾರ, ಸಾಲ, ಮರುಪಾವತಿ ಇತ್ಯಾದಿಗಳ ಬಗ್ಗೆ ಸ್ಪಷ್ಟತೆ ನೀಡಲಾಗಿತ್ತು.
ಜಿಎಸ್ಟಿ ಅಡಿಯಲ್ಲಿ ಪಾವತಿಸಬೇಕಾದ ಸಂಪೂರ್ಣ ಪರಿಹಾರದ ಅರ್ಹತೆಗೆ ಸಂಬಂಧಿಸಿದಂತೆ ರಾಜ್ಯಗಳ ಹಕ್ಕುಗಳನ್ನು ಕೇಂದ್ರ ಸರ್ಕಾರವು ಗುರುತಿಸಿರುವುದನ್ನು ನಾವು ಸ್ವಾಗತಿಸುತ್ತೆವೆ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ.
ಕೇಂದ್ರ ಸರ್ಕಾರ ನೀಡಿದ್ದ ಎರಡು ಆಯ್ಕೆಗಳ ಪೈಕಿ ರಾಜ್ಯ ಸರ್ಕಾರ ಮೊದಲನೇ ಆಯ್ಕೆಗೆ ಸಮ್ಮತಿಸಿರುವುದರಿಂದ ರಿಸರ್ವ್ ಬ್ಯಾಂಕ್ ಮೂಲಕ ಸಲೀಸಾಗಿ ಸಾಲ ಪಡೆದುಕೊಳ್ಳಬಹುದಾಗಿದೆ. ಜತೆಗೆ ಬಡ್ಡಿ ಅಸಲು ಪಾವತಿಯನ್ನು ಕೇಂದ್ರವೇ ಪಾವತಿಸಲಿದೆ. ಕೇಂದ್ರದಿಂದ ಬರಬೇಕಾದ ಪಾಲು ಕಡಿಮೆಯಾಗಬಹುದು. ಆದರೂ ಸಹ ಜಿಎಸ್ಡಿಪಿಯ ಶೇ.1ರಷ್ಟು ಸಾಲವನ್ನು ಸ್ವತಃ ತಾನೇ ಪಡೆಯುವ ಅವಕಾಶವನ್ನು ಮುಕ್ತವಾಗಿರಿಸಿಕೊಂಡಂತಾಗಿದೆ.
ನಮಗೆ ಇದರಿಂದ ಸಿಗೋದೇನು..?
ನಮ್ಮ ರಾಜ್ಯ ಸರ್ಕಾರ ಮೊದಲನೇ ಆಯ್ಕೆಗೆ ಸಮ್ಮತಿಸಿರುವುದರಿಂದ ಕರ್ನಾಟಕ ಒಟ್ಟು 18,289 ಕೋಟಿ ರೂ. ಪರಿಹಾರಕ್ಕೆ ಅರ್ಹವಾಗಿರುತ್ತದೆ. ಇದರಲ್ಲಿ 6,965 ಕೋಟಿ ರೂ. ಸಂಗ್ರಹಿಸಿದ ಸೆಸ್ನಿಂದ ಬರುತ್ತದೆ. ಉಳಿದ 11,324 ಕೋಟಿ ರೂ.ಗಳಿಗೆ ಕರ್ನಾಟಕವು ವಿಶೇಷ ಮಾರ್ಗದಲ್ಲಿ ಸಾಲ ಪಡೆಯಲು ಅನುವು ಮಾಡಿಕೊಡಲಾಗಿದೆ. ಅಲ್ಲದೆ, ಭವಿಷ್ಯದಲ್ಲಿ ಪರಿಹಾರ ಸೆಸ್ ನಿಧಿಯಿಂದ ಅಸಲು ಮತ್ತು ಬಡ್ಡಿ ಮರುಪಾವತಿಯ ಸಂಪೂರ್ಣ ಹೊರೆಯನ್ನು ಕೇಂದ್ರವೇ ಪೂರೈಸಲಿದೆ. ಜತೆಗೆ ಜಿಎಸ್ಡಿಪಿಯ ಶೇ.1 (ರೂ.18,036 ಕೋಟಿ) ಹೆಚ್ಚುವರಿ ಸಾಲವು ಯಾವುದೇ ಷರತ್ತಿಗೆ ಒಳಪಡದೆ ಲಭ್ಯವಿರುತ್ತದೆ.