ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ನಗರ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್, ಸ್ಲೋ ಮೂವಿಂಗ್ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ಲಾಕ್ ಡೌನ್ ಸಡಿಲಿಕೆಯ ಬಹುತೇಕ ನಿಯಮಗಳು ಬೆಂಗಳೂರಿಗೆ ಅನ್ವಯ ಆಗೋದಿಲ್ಲ. ಯಾಕಂದ್ರೆ ಬೆಂಗಳೂರು ಕೊರೊನಾ ರೆಡ್ ಜೋನ್ ಲಿಸ್ಟ್ ನಲ್ಲಿ ಇದೆ. ಇದನ್ನ ಅರಿಯದ ಜನ ತಮ್ಮ ವಾಹನಗಳ ಮೂಲಕ ರಸ್ತೆಗೆ ಇಳಿದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿದೆ.
ಟೌನ್ ಹಾಲ್, ಕೆ.ಆರ್ ಮಾರ್ಕೆಟ್, ಹೆಬ್ಬಾಳ, ಮೈಸೂರು ರಸ್ತೆ, ಕೆ.ಆರ್ ಸರ್ಕಲ್, ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಇನ್ನು ಹಲವು ಕಡೆಗಳಲ್ಲಿ ಸ್ಲೋ ಮೂವಿಂಗ್ ಮತ್ತು ಟ್ರಾಫಿಕ್ ಜಾಮ್ ಇದೆ.
ಪೊಲೀಸರಿಗೆ ತಲೆನೋವಾದ ವೆಹಿಕಲ್ ಚೆಕ್ಕಿಂಗ್..!
ಲಾಕ್ ಡೌನ್ ಸಡಲಿಕೆಯಿಂದ ಬೆಂಗಳೂರಲ್ಲಿ ವಾಹನಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಪೊಲೀಸರಿಗೆ ವೆಹಿಕಲ್ ಚೆಕ್ಕಿಂಗ್ ಮಾಡೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟೌನ್ ಹಾಲ್ ಮುಂಭಾಗದಲ್ಲಿಯೇ ವೆಹಿಕಲ್ ಚೆಕ್ಕಿಂಗ್ ಪಾಯಿಂಟ್ ಇರೋದ್ರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಹಲವು ಸ್ಟೇಷನ್ ಗಳಲ್ಲಿ ಸೀಜ್ ಮಾಡಿದ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೆ ಪರ್ಯಾಯ ವ್ಯವಸ್ಥೆಗೆ ಇಲಾಖೆ ಮುಂದಾಗಿದೆ








