ರಾಜ್ಯಾದ್ಯಾಂತ ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಬೆಂಗಳೂರು ಪೊಲೀಸರ ಹೊಸ ಮತ್ತು ಕ್ರಿಯಾತ್ಮಕ ಕ್ರಮವನ್ನು ಜಾರಿಗೆ ತಂದಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಈಗ ಲಾಕಿಂಗ್ ಹೌಸ್ ಚೆಕ್ಕಿಂಗ್ ಸಿಸ್ಟಮ್ ಎಂಬ ಪರಿಕಲ್ಪನೆ ಮಾಡಲಾಗಿದೆ, ಇದರಿಂದ ನೀವು 1 ದಿನಕ್ಕಿಂತ ಹೆಚ್ಚು ಸಮಯ ಪ್ರವಾಸ ಅಥವಾ ಊರಿಗೆ ಹೋಗುವುದಿದ್ದರೆ, ಅದನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕಾಗುತ್ತದೆ.
ಈ ಹೊಸ ವ್ಯವಸ್ಥೆಯು ಹೇಗೆ ಕೆಲಸ ಮಾಡುತ್ತದೆ:
1. ಹೌಸ್ ಲಾಕ್ : ನೀವು ಹೊರಗೆ ಹೋಗುವ ಮುನ್ನ ನಿಮ್ಮ ಸಮೀಪದ ಪೊಲೀಸ್ ಠಾಣೆಗೆ ಹೌಸ್ ಲಾಕ್ ಬಗ್ಗೆ ಮಾಹಿತಿ ನೀಡಬೇಕು.
2. ಹೋಯ್ಸಳ ಸಹಾಯ: ಈ ಮಾಹಿತಿಯನ್ನು ರಾತ್ರಿ ಗಸ್ತು ತಿರುಗುವ ಹೊಯ್ಸಳ ಸಿಬ್ಬಂದಿಗೆ ಮುಂಚಿತವಾಗಿ ತಲುಪಿಸಲಾಗುತ್ತದೆ.
3. ಮನೆ ಹತ್ತಿರ ಮೇಲ್ವಿಚಾರಣೆ: ಹೊಯ್ಸಳ ಸಿಬ್ಬಂದಿ ನಿಮ್ಮ ಮನೆ ಹತ್ತಿರದಲ್ಲಿ ಪಟ್ರೋಲ್ ಮಾಡುವ ಮೂಲಕ, ಯಾವುದೇ ಅಪರಾಧಿ ಕ್ರಿಯೆಗಳನ್ನು ತಡೆಗಟ್ಟುವ ಕಾರ್ಯತಂತ್ರವನ್ನು ಅನುಸರಿಸುತ್ತಾರೆ.
ಈ ರೀತಿಯ ನೀವು 1 ದಿನಕ್ಕಿಂತ ಹೆಚ್ಚು ಸಮಯ ಪ್ರವಾಸ ಅಥವಾ ಊರಿಗೆ ಹೋಗುವುದಿದ್ದರೆ, ಪೊಲೀಸರೇ ನಿಮ್ಮ ಮನೆ ಕಾವಲು ಕಾಯುವಂತೆ ವ್ಯವಸ್ಥೆ ಮಾಡಲಾಗುತ್ತದೆ.
ಈ ವ್ಯವಸ್ಥೆಯು ಬೆಂಗಳೂರಿನ ದಕ್ಷಿಣ ವಿಭಾಗದಲ್ಲಿ ಈಗಾಗಲೇ ಜಾರಿಯಾಗಿದ್ದು, ಮನೆಗಳಿಗೆ ಸುರಕ್ಷತೆ ಹೆಚ್ಚಿಸಲು ಇದು ಅನೇಕ ಜನರಿಗೆ ಸಹಾಯಕವಾಗಲಿದೆ.
ಈ ವ್ಯವಸ್ಥೆಯು ದೊಡ್ಡ ಮೊತ್ತದ ಅಪರಾಧಗಳನ್ನು ತಡೆಯಲು ಮತ್ತು ಆಗಾಗ್ಗೆ ನಡೆಯುವ ಮನೆಗಳ್ಳತನ ದರವನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ.








