ADVERTISEMENT
Sunday, June 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಒಂಟಿತನಕೆ ಕಾರಣ‌ರಾರು…

admin by admin
May 27, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ತಂಪಾಗಿ ಬೀಸೊ ತಂಗಾಳಿಗೆ ಮೈಯೊಡ್ಡಬೇಕೆಂಬ ಮನಸು. ಆಗಸದಿ ಹಾರುವ ಹಕ್ಕಿಯ ಕಂಡು ಮನದಲ್ಲೇನೋ ತಲ್ಲಣ. ನಾನೊಮ್ಮೆಹಾರಿಬಿಡಲೆ ಹಕ್ಕಿಯಂತೆ ಎಲ್ಲವ ಮರೆತು. ಯೋಚಿಸಲು ಏನೂ ಇಲ್ಲ, ಯೋಚಿಸದ್ದಿದ್ದರೂ ನನ್ನವರೆನ್ನುವವರು ಯಾರೂ ಇಲ್ಲ ಎಂದು ಹೇಳುತಿರುವ ಮನಸು.. ಏಕಾಗಿ ಈ ಒಂಟಿತನ ಅರಿಯದಾಗಿದೆ ಮನಸು. ಜೊತೆ ನೂರಾರು ಮಂದಿಯಿದ್ದರೂ ಯಾರು ನನ್ನವರಲ್ಲ‌ವೆನ್ನುವ ಭಾವನೆ.. ಒಬ್ಬಂಟಿಯಾಗಿ ಇದ್ದೋ ಏನೋ, ಇನ್ನೂ ಒಪ್ಪುತ್ತಿಲ್ಲ ಮನಸ್ಸು ಇವರೆಲ್ಲ ನನ್ನವರೆಂದು.. ಹೀಗೆ ಯೋಚನೆಯ ಕಡಲಲ್ಲಿ ತೇಲುತಿರುವವರೇ ಈ ನನ್ನ ಲೇಖನದ ಕರ್ತೃಗಳು. ಹುಡುಕ ಹೊರಟವರಿವರು ಕೈಗೆಟಕದ ಚಂದ್ರನ ಕೈಯಲ್ಲಿ ತರಲೆಂದು.. ಕಾಲೆಳೆಯುವ ಜನರ ನಡುವೆ ತಲೆಯೆತ್ತಬೇಕೆಂದು ಹೆತ್ತವರ ಬಿಟ್ಟು ದೂರದೂರಿಗೆ.. ಓಡುತ್ತಿರುವ ಜಗದೆದುರಲ್ಲಿ ಓಟಕ್ಕೆ ನಿಂತವರು.. ಪ್ರೀತಿ ವಿಶ್ವಾಸ ನಂಬಿಕೆಯೆಂಬ ಅಮೂಲ್ಯ ರತ್ನವ ಮರೆತು ಬದುಕೆಂಬ ಬವಣೆಯ ಏಕಾಂಗಿಯಾಗಿ ಕಳೆಯಲೆಂದು ಹೊರಟವರಿವರು..

ಅದೊಮ್ಮೆ ಕೈಯ ತುತ್ತ ಉಣಿಸ ಬಂದ ತಾಯ ಕೈಯ ತುತ್ತ ಚೆಲ್ಲಿ..‌ ಅವಳ ಪ್ರೀತಿಯ ಮಾತ ಕೇಳಿಸಿಯೂ ಕೇಳದಂತೆ ಹೋದವರು..
ಅಪ್ಪನ ಅಕ್ಕರೆಯ ಮರೆತು ಆಕಾಶದೆತ್ತರಕ್ಕೆ ಹಕ್ಕಿಯಂತೆ ಹಾರಿ ಹೊರಟವರು..

Related posts

ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

June 28, 2026
ಕಳೆದ 15 ವರ್ಷಗಳ ಪಾಪದ ಲೆಕ್ಕ ಚುಕ್ತಾ ಆಗಲಿದೆ:ಭದ್ರತೆಯಿಲ್ಲದೆ ಬಿಜೆಪಿ ನಾಯಕರು ಓಡಾಡಲಾಗದ ಕಾಲ ಬರಲಿದೆ – ಪವನ್ ಖೇರಾ

ಕಳೆದ 15 ವರ್ಷಗಳ ಪಾಪದ ಲೆಕ್ಕ ಚುಕ್ತಾ ಆಗಲಿದೆ:ಭದ್ರತೆಯಿಲ್ಲದೆ ಬಿಜೆಪಿ ನಾಯಕರು ಓಡಾಡಲಾಗದ ಕಾಲ ಬರಲಿದೆ – ಪವನ್ ಖೇರಾ

June 28, 2026

ನೀ ಹಾಕುವ ಒಂದು ಹೊತ್ತಿನ ಗಂಜಿಯಾದರು ನಿನ್ನೊಂದಿಗಿರುವೆ ಮಗನೆ, ಬಿಟ್ಟು ಹೋಗದಿರು ಎಂದು ಅಂಗಲಾಚಿದ ಹೆತ್ತವ್ವನ ವೃದ್ಧಾಶ್ರಮವೆಂಬ ತಾಯ ಪಾಲಿನ ಮಸಣದಲಿ ಬಿಟ್ಟು ಹಿಂತಿರುಗಿಯೂ ನೋಡದೆ ಇನ್ನೆಂದು ಬರಲಾರೆನಮ್ಮ ಎನ್ನುವ ಸತ್ಯವ ತಿಳಿಸದೆ..
ಆದಷ್ಟು ಬೇಗ ಬರುವೆಯೆಂಬ ಸುಳ್ಳು ಭರವಸೆಯಲೇ ತಾಯ ಮನಸ ನೋಯಿಸಿದವರು..
ಹುಡುಕುತಿರುವರಿಂದು ನೆಮ್ಮದಿಯ ಜೀವನವ.. ತಡವರಿಸುತಿರುವರಿಂದು ಕಾರಣ ನೋವ ಹಂಚಿಕೊಳ್ಳಲು ಯಾರು ನನ್ನವರಿಲ್ಲ ಎಂದು..
ಹುಡುಕುತಲೆ ದಿನ ಕಳೆಯುತಿರುವರಿಂದು ಯಾರು ನನ್ನವರೆಂದು.. ನಾನೇಕೆ ಒಂಟಿಯಾದೆನೆಂದು..
ಅಂದು ತನ್ನವರ ಬಿಟ್ಟು ಹೋದ ಬದುಕ ಮತ್ತೆ ಪಡೆಯಲೆಂದು ಬಂದಿಹರು.. ಕಟ್ಟಿದ್ದ ಗೂಡನರಸಿ.. ಹೆತ್ತವರ ಕನಸಿನ ಗೂಡು ಹಾಗೇ ಇದ್ದರೂ ಗೂಡೊಳಗಿನ ರಾಜ ರಾಣಿಯು ಮರೆಯಾಗಿಹರೆಂದು ಅರಿಯದೆ.. ಕಲಿಯುಗವಿದು ತಪ್ಪಿಗೆ ಶಿಕ್ಷೆ ಇದೆ ಈ ಜನುಮದಲೆ ಎಂದು ಅರಿತಿದ್ದರೂ ಕ್ಷಮಿಸಲಾಗದ ತಪ್ಪ ಮಾಡಿ
ಕ್ಷಮೆಯ ಕೇಳಿದರೇನು ಪ್ರಯೋಜನ ? ಹೆತ್ತವರ ಕಣ್ಣೊರೆಸುವ ಕೈಯಾಗದೆ ಕಣ್ಣೀರಲ್ಲಿ ಕೈಯ ತೊಳೆಸಿದ ಪಾಪ ಮರೆಯಾಗಬಹುದೆ?
ಏಕಾಂತವೇ ಸೊಗಸು, ಒಬ್ಬಂಟಿಯಾಗಲೆಂದೇ ಹೊರಟು ಇಂದು ತನ್ನವರ ಹುಡುಕುತಿರುವ ಮೂರ್ಖ ಜನರು.. ಮನದ ತಲ್ಲಣವ ಹಂಚಿಕೊಳ್ಳಲು ಮನವನರಸುತ ಹುಡುಕಾಡುತಿರುವವರು..

ಹುಡುಕಿದರೆ ಸಿಗಬಹುದೇನೋ ಕಾರಣ ಈ ಒಂಟಿತನಕೆ… ಮರುಕ ಪಡಬಹುದು ಮನಸು ಒಂದೊಮ್ಮೆ ಯೋಚಿಸಿದಾಗ ಮರೆಯಾದವರಾರು ನಮ್ಮಿಂದ ಎಂದು… ಆದರೆ ಕಾರಣ ಸಿಗುವುದೊಂದೆ ಎಲ್ಲವ ಕಾಲಲೇ ತುಳಿದು ಬಿಟ್ಟು ಬಂದವರು ನಾವೆಂದು… ನಾ ಹೆತ್ತ ಮಗನಿರುವನೆಂದು ಅವನ ಬದುಕ ಕನಸ ಹೊತ್ತಿದ್ದ ತಾಯಿಯೆಂದೂ ಒಂಟಿಯಾಗಿರಲಿಲ್ಲ.‌ ಮಗನಿರುವನು ನನಗೆ ಎನ್ನುವ ಅವಳ ಪ್ರೀತಿ ಅವಳನೆಂದು

ಒಂಟಿಯಾಗಿಸಲಿಲ್ಲ.. ಯೋಚಿಸಿದಾಗ ಒಂಟಿಯಾದುದು ಯಾರು? ತಾಯ ಪ್ರೀತಿಯ ಮರೆತು ದೂರದಲೆಲ್ಲೋ ಅವಳ ನೆನಪು ಬಾರದಂತೆ ಬದುಕಿದವರು.. ಹುಡುಕಿದರೆ ಸಿಗಬಹುದೇನೋ ಕಾರಣ ಒಂಟಿತನಕೆ.. ಇಂದಿಗೂ ಕಾಲವಿನ್ನೂ ಮಿಂಚಿಲ್ಲ ಯೋಚನೆಯ ಕಡಲಿಂದ ಒಮ್ಮೆ ಹೊರಬಂದು ಯೋಚಿಸು ಮನವೇ, ಯೋಚನೆಯಲೇ ನೀ ಮರೆತ ಇನ್ನೊಂದು ಹ್ರದಯ ಇನ್ನು ನಿನ್ನ ನೆನಪಲ್ಲೆ ಕಾಯುತಿರಬಹುದು… ನೀ ಬರುವೆಯೆಂದು ನಿನ್ನ ಮಾತ ಕೇಳುವ ಕಿವಿಯಾಗಲು..

ಶ್ವೇತಾ.S. ದೇವಾಡಿಗ ಕಾಂತಾವರ

Tags: Alone
ShareTweetSendShare
Join us on:

Related Posts

ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

by Shwetha
June 28, 2026
0

ನವದೆಹಲಿ: ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಹಾಗೂ ಪಶ್ಚಿಮ ಏಷ್ಯಾ ರಾಷ್ಟ್ರಗಳ ಜೊತೆಗಿನ ಸಂಬಂಧದ ಕುರಿತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಅಸಮಾಧಾನ...

ಕಳೆದ 15 ವರ್ಷಗಳ ಪಾಪದ ಲೆಕ್ಕ ಚುಕ್ತಾ ಆಗಲಿದೆ:ಭದ್ರತೆಯಿಲ್ಲದೆ ಬಿಜೆಪಿ ನಾಯಕರು ಓಡಾಡಲಾಗದ ಕಾಲ ಬರಲಿದೆ – ಪವನ್ ಖೇರಾ

ಕಳೆದ 15 ವರ್ಷಗಳ ಪಾಪದ ಲೆಕ್ಕ ಚುಕ್ತಾ ಆಗಲಿದೆ:ಭದ್ರತೆಯಿಲ್ಲದೆ ಬಿಜೆಪಿ ನಾಯಕರು ಓಡಾಡಲಾಗದ ಕಾಲ ಬರಲಿದೆ – ಪವನ್ ಖೇರಾ

by Shwetha
June 28, 2026
0

ಹೊಸದೆಹಲಿ: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ನಾಯಕರು ಸಾರ್ವಜನಿಕವಾಗಿ ಭದ್ರತೆಯಿಲ್ಲದೆ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸುವ ಮೂಲಕ ಕಾಂಗ್ರೆಸ್ ಹಿರಿಯ...

ಪ್ರದೀಪ್ ಈಶ್ವರ್ ಮತ್ತೆ ಗೆದ್ದರೆ ಅವರ ಮನೆ ಮುಂದೆ ಸೆಕ್ಯೂರಿಟಿ ಕೆಲಸ ಮಾಡ್ತೀನಿ: ಗಂಡಸ್ತನವಿದ್ರೆ ಸವಾಲ್ ಸ್ವೀಕರಿಸು ಶಾಸಕ ಪ್ರದೀಪ್ ಈಶ್ವರ್ ಗೆ ರವಿಕುಮಾರ್ ಓಪನ್ ಚಾಲೆಂಜ್

ಪ್ರದೀಪ್ ಈಶ್ವರ್ ಮತ್ತೆ ಗೆದ್ದರೆ ಅವರ ಮನೆ ಮುಂದೆ ಸೆಕ್ಯೂರಿಟಿ ಕೆಲಸ ಮಾಡ್ತೀನಿ: ಗಂಡಸ್ತನವಿದ್ರೆ ಸವಾಲ್ ಸ್ವೀಕರಿಸು ಶಾಸಕ ಪ್ರದೀಪ್ ಈಶ್ವರ್ ಗೆ ರವಿಕುಮಾರ್ ಓಪನ್ ಚಾಲೆಂಜ್

by Shwetha
June 28, 2026
0

ಬಿಡದಿ ಟೌನ್‌ಶಿಪ್ ವಿಚಾರವಾಗಿ ಆರಂಭವಾದ ರಾಜಕೀಯ ಜಟಾಪಟಿ ಈಗ ವೈಯಕ್ತಿಕ ಸವಾಲು ಮತ್ತು ಪಂಥಾಹ್ವಾನಗಳ ಹಂತಕ್ಕೆ ತಲುಪಿದೆ. ಸಿಎಂ ಡಿ ಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ...

ರಿಯಲ್ ಎಸ್ಟೇಟ್ ದಂಧೆಗಾಗಿ ರೈತರ ಭೂಮಿ ಬೇಕೆ: ರೈತರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ -ಖಾಲಿ ಕುರ್ಚಿ ಬಿಟ್ಟು ಡಿಕೆಶಿಗೆ ಸವಾಲು ಹಾಕಿದ ಹೆಚ್ ಡಿ ಕುಮಾರಸ್ವಾಮಿ

ರಿಯಲ್ ಎಸ್ಟೇಟ್ ದಂಧೆಗಾಗಿ ರೈತರ ಭೂಮಿ ಬೇಕೆ: ರೈತರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ -ಖಾಲಿ ಕುರ್ಚಿ ಬಿಟ್ಟು ಡಿಕೆಶಿಗೆ ಸವಾಲು ಹಾಕಿದ ಹೆಚ್ ಡಿ ಕುಮಾರಸ್ವಾಮಿ

by Shwetha
June 28, 2026
0

ಬಿಡದಿ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ. ಭೈರಮಂಗಲದಲ್ಲಿ ನಡೆದ ರೈತರ...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (28-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 28, 2026
0

ದಿನ ಭವಿಷ್ಯ : 28-06-2026 1. ಮೇಷ ರಾಶಿ ಇಂದಿನ ದಿನ ನಿಮಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ಸೂರ್ಯನ ಪ್ರಭಾವದಿಂದಾಗಿ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ, ಆದರೆ ಅತಿಯಾದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram