ಉದ್ದ ಹಾಗೂ ದಟ್ಟ ಕೂದಲು ನಿಮ್ಮದಾಗಿಸಿಕೊಳ್ಳಲು , ಕೂದಲು ಆರೈಕೆಗೆ ಕೆಲ ಟಿಪ್ಸ್..!

1 min read

ಉದ್ದ ಹಾಗೂ ದಟ್ಟ ಕೂದಲು ನಿಮ್ಮದಾಗಿಸಿಕೊಳ್ಳಲು , ಕೂದಲು ಆರೈಕೆಗೆ ಕೆಲ ಟಿಪ್ಸ್..!

ಉದ್ದ , ದಟ್ಟ , ಕಪ್ಪು ಹಾಗೂ ಸುಂದರ ಕೂದಲು ಪಡೆಯುವುದು ಪುಟ್ಟು ಹುಡುಗಿಯರಿಂದ ಹಿಡಿದು ಮಧ್ಯವಯಸ್ಸಿನ ಮಹಿಳೆಯರ ಕನಸಾಗಿರುತ್ತೆ.. ಆದ್ರೆ ಕೆಲವೊಮ್ಮೆ ಕೂದಲು ಉದುರುವುದು, ಪರಕೆಯಂತೆ ಆಗುವುದು, ಸಿಕ್ಕಾಗುವುದು, ವಯಸ್ಸಿಗೆ ಮುಂಚೆಯೇ ಬಿಳಿ ಕೂದಲು ಬರುವುದು, ಕೂದಲು ಬೆಳೆಯುವುದೇ ನಿಂತು ಹೋಗುತ್ತದೆ..  ಆದ್ರೆ ಕೂದಲ ಆರೈಕೆ ತುಂಬಾನೆ ಮುಖ್ಯವಾಗಿರುತ್ತೆ.. ಆದ್ರೆ ಕೂದಲು ಉದುರಿಕೆ ಸಮಸ್ಯೆ ಕೇವಲ ಮಹಿಳೆಯರನ್ನ ಮಾತ್ರವಲ್ಲದೇ ಪುರುಷರನ್ನು ಕಾಡುತ್ತದೆ.  ಕೂದಲು ಉದುರುವಿಕೆಗೆ ಹಲವಾರು ಅಂಶಗಳು ಕಾರಣವಾಗಬಹುದು. ಕಳಪೆ ಆಹಾರ, ಜೀವನಶೈಲಿ, ಅನಾರೋಗ್ಯಕರ ಕೂದಲ ರಕ್ಷಣೆಯ ದಿನಚರಿ ಮತ್ತು ಹಲವಾರು ತಪ್ಪುಗಳು ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಕೂದಲು ಉದುರುವುದನ್ನು ನಿಯಂತ್ರಿಸುವುದಾಗಿ ಹೇಳಿಕೊಳ್ಳುವ ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಆದರೆ ಅನೇಕರು ಬಯಸಿದ ಫಲಿತಾಂಶವನ್ನು ಪಡೆಯುವಲ್ಲಿ ವಿಫಲರಾಗ್ತಾರೆ. ಕೂದಲು ಉದುರುವುದನ್ನು ಎದುರಿಸಲು ಅಗ್ಗದ ಆಯುರ್ವೇದ ಪರಿಹಾರಗಳನ್ನು ಬಳಸಬಹುದು. ನಿಮ್ಮ ಮನೆಯಲ್ಲಿ ಸರಳ ವಿಧಾನಗಳೊಂದಿಗೆ ಇವುಗಳನ್ನು ನೀವು ಬಳಸಬಹುದು. ಕೂದಲು ಉದುರುವಿಕೆಯ ವಿರುದ್ಧ ಹೋರಾಡಲು ಕೆಲವು ಪರಿಣಾಮಕಾರಿ ಆಯುರ್ವೇದ ಪರಿಹಾರಗಳನ್ನು ಕಂಡುಕೊಳ್ಳಬಹುದು..

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಹಲವಾರು ಗಿಡಮೂಲಿಕೆಗಳ ಬಗ್ಗೆ ನಾವಿವತ್ತು ತಿಳಿಯೋಣSaakshatv healthtips amla

1.    ಆಮ್ಲ

ಕೂದಲು ಉದುರುವಿಕೆಯನ್ನ ತಡೆಯುವಲ್ಲಿ ಆಮ್ಲ / ಬೆಟ್ಟದ ನೆಲ್ಲಿಕಾಯಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಆಮ್ಲಾದಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ, ಇದು ಕೂದಲಿನ ಹಾನಿಯನ್ನು ನಿಯಂತ್ರಿಸಲು ಮತ್ತು ಆರೋಗ್ಯಕರ ಕೂದಲು ಕೋಶಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

2.    ಸೀಗೆಕಾಯಿ

ಸಾಧಾರಣವಾಗಿ ಈಗಿನ ದಿನಗಳಲ್ಲಿ ಯಾರೂ ಹೆಚ್ಚಾಗಿ ಸೀಗೇಕಾಯಿಯನ್ನ ಬಳಸುವುದಿಲ್ಲ. ಆದ್ರೆ ಸೀಗೇಕಾಯಿ – ರೀಟಾ – ಆಮ್ಲ ಮೂರು ಮಿಶ್ರಣ ಮಾಡಿ ಬಳಸುವುದರಿಂದ ಕೂದಲು ಉದುರುವುದು ಕಡಿಮೆಯಾಗುವ ಜೊತೆಗೆ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ರೀಥಾ ಕಬ್ಬಿಣದ ಅಂಶದಿಂದ ತುಂಬಿದ್ದು ಕೂದಲಿನ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

3.    ಆಲೋವೇರಾ / ಲೋಳೆರಸ

ಅಲೋ ವೆರಾವನ್ನು ಅನೇಕ ಚರ್ಮ ಮತ್ತು ಕೂದಲಿನ ಸಮಸ್ಯೆಗಳ ವಿರುದ್ಧ ಹೋರಾಡಲು ಬಳಸಬಹುದು. ನಿಮ್ಮ ಎಲ್ಲಾ ಚರ್ಮದ ಸಮಸ್ಯೆಗಳಿಗೆ ಇದು ಒಂದು ನಿಲುಗಡೆ ಪರಿಹಾರವಾಗಿದೆ. ನಿಮ್ಮ ಕೂದಲಿಗೆ ಅಲೋವೆರಾ ಜೆಲ್ ಅನ್ನು ಸಹ ನೀವು ಅನ್ವಯಿಸಬಹುದು. ಇದು ನಿಮ್ಮ ನೆತ್ತಿಯ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಇದು ಕೂದಲಿನ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ. ನೀವು ತಾಜಾ ಅಲೋವೆರಾ ಜೆಲ್ ಅನ್ನು ಹೊರತೆಗೆದು ನಿಮ್ಮ ನೆತ್ತಿಗೆ ಮಸಾಜ್ ಮಾಡಬಹುದು. ಅಲ್ಲದೆ, ಇದನ್ನು ನಿಮ್ಮ ಕೂದಲಿಗೆ ಬೇರುಗಳಿಂದ ತುದಿಗಳವರೆಗೆ ಸರಿಯಾಗಿ ಅನ್ವಯಿಸಿ. ಮೃದುವಾದ, ನಯವಾದ ಮತ್ತು  ಸಿಕ್ಕು ರಹಿತ ಕೂದಲನ್ನು  ಪಡೆಯಲು ಸಹಾಯ ಮಾಡುತ್ತದೆ.Saakshatv healthtips aloe vera juice

4.  ಈರುಳ್ಳಿ – ಮೆಂತ್ಯ

ನಿಯಮಿತವಾಗಿ ತಿಂಗಳಿಗೊಮ್ಮೆ ಹಾಗೂ ಮೆಂತ್ಯವನ್ನ ರುಬ್ಬಿ ತಲೆಗೆ ಹಚ್ಚಿಕೊಳ್ಳುವದರಿಂದಲೂ ಕೂದಲು ಉದುರುವುದು ಕಡಿಮೆಯಾಗಿ ಕೂದಲ ಬೆಳವಣಿಗೆಯನ್ನ ಹೆಚ್ಚಿಸುತ್ತದೆ.

5.   ದಾಸವಾಳ

ಬಿಳಿ ದಾಸವಾಳದ ಎಲೆಗಳನ್ನ ರುಬ್ಬಿ ತಲೆಗೆ ಹಚ್ಚಿಕೊಂಡು 1 ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ನಯವಾಗುತ್ತದೆ.. ಹೀಗೆ ತಿಂಗಳಿಗೆ ಒಂದು ಬಾರಿ ಮಾಡಿದ್ರು ಒಳ್ಳೆಯದು..

ಕೊರೊನ ಮಹಾಮಾರಿ:

 ಕೊರೊನ ವೈರಸ್  ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.

 ತಪ್ಪದೇ ಹೊರಗೆ ಹೋದಾಗ  ಸ್ವಚ್ಛವಾದ ಮಾಸ್ಕ ಧರಿಸಿ.

 ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .

 ಜನ ನಿಬಿಡ ಪ್ರದೇಶದಿಂದ ದೂರವಿರಿ.

 ಮನೆ ಸಮೀಪದ  ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.

 ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.

 ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ  ಸ್ನಾನ ಮಾಡಿ.

 ನಮ್ಮ  ಹೋರಾಟ ಕೊರೊನ ನಿರ್ಮೂಲನೆಯತ್ತ.

 ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd