ಸುಶಾಂತ್ ಸಾವಿನ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಾ ದೇಶಾದ್ಯಂತ ಸಂಚಲನ ಮೂಡಿಸಿದೆ. ಒಂದೆಡೆ ಸುಸಾಂತ್ ಸಾವಿನ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂದು ಬಿಹಾರದ ಪೊಲೀಸರು ಆರೋಪಿಸಿದ್ರೆ, ಮತ್ತೊಂದೆಡೆ ಸುಶಾಂತ್ ಪ್ರೇಯಸಿ ರೆಹಾ ದಿನೇ ದಿನೇ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗ್ತಲೇ ಇದ್ದಾರೆ.
ರೆಹಾ ವಿರುದ್ಧ ಸುಶಾಂತ್ ತಂದೆ ಕೆಕೆ ಸಿಂಗ್ ದೂರು ದಾಖಲಿಸಿದ ತಕ್ಷಣವೇ ಮುಂಬೈನ ನಿವಾಸದಿಂದ ಎಸ್ಕೇಪ್ ಆಗಿದ್ದ ರೆಹಾ ಅಜ್ಞಾತ ಸ್ಥಳದಲ್ಲಿದ್ದಾರೆ. ಇದರ ಬೆನ್ನಲ್ಲೇ ರೆಹಾ ಹಾಗೂ ಕುಟುಂಬಸ್ಥರು ವಾಸಿಸುತ್ತಿದ್ದ ಮನೆಯಿಂದ ರಾತ್ರೋರಾತ್ರಿ ಗಂಟುಮೂಟೆ ಸಮೇತ ಖಾಲಿ ಮಾಡಿರುವುದಾಗಿ ಕಟ್ಟಡದ ಮಾಲೀಕರು ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗೆಳ ನಡುವೆ ಇದೀಗ ಒಂದ್ ಹೆಜ್ಜೆ ಮುಂದಿಟ್ಟಿರುವ ಬಿಹಾರದ ಪೊಲೀಸರು ರೆಹಾ ಸಿಗದೇ ಹೋದಲ್ಲಿ ಲುಕ್ ಔಟ್ ನೋಟೀಸ್ ಹೊರಡಿಸುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದೆಡೆ ರೆಹಾ ಅಕ್ರಮವಾಗಿ ಸುಶಾಂತ್ ಖಾತೆಯಿಂದ ತಮ್ಮ ಖಾತೆಗೆ ಕೋಟ್ಯಾಂತರ ರೂಪಾಯಿ ವರ್ಗಾಯಿಸಿಕೊಂಡಿರುವ ಆರೋಪವಿದ್ದು, ಸುಶಾಂತ್ ಅವರ ಕ್ರೆಡಿಟ್ ಕಾರ್ಡ್ ನಿಂದ ಬೇಕಾಬಿಟ್ಟಿ ಹಣ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ರೆಹಾ ವಿರುದ್ಧ ಈ ಸಂಬಂಧ ಈಗಾಗಲೇ ಇಡಿ ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ.