ಬೆಂಗಳೂರು: ಲಾರಿಯೊಂದು ಚಲಿಸುತ್ತಿದ್ದ ಬೈಕ್ ಗೆ (Bike) ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ (Bengaluru) ದಾಸರಹಳ್ಳಿ ಮೆಟ್ರೋ ಸ್ಟೇಷನ್ (Dasarahalli Metro Station) ಹತ್ತಿರ ಈ ಘಟನೆ ನಡೆದಿದೆ. ಶೇಷಾದ್ರಿ (23) ಸಾವನ್ನಪ್ಪಿರುವ ಬೈಕ್ ಸವಾರ ಎನ್ನಲಾಗಿದೆ. ಶೇಷಾದ್ರಿ ರಾಜಗೋಪಾಲನಗರ ನಿವಾಸಿ ಎನ್ನಲಾಗಿದೆ.
ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕನು ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತ ನಡೆಸಿದ ಲಾರಿಯನ್ನು ಪೀಣ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮೃತ ಶೇಷಾದ್ರಿ ತಂದೆ ಚಂದ್ರಶೇಖರ್ ಪೀಣ್ಯಾ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.