ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ನಿಷೇಧಿಸಬೇಕು | ಹಿಂದೂಪರ ಸಂಘಟನೆಗಳ ಒತ್ತಾಯ
ಬೆಂಗಳೂರು : ರಾಜ್ಯದಲ್ಲಿ ಹಿಜಾಬ್, ಹಿಂದು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪರಿಸ್ಥರಿಗೆ ನಿಷೇಧ, ಹಾಲಾಲ್ ಕಟ್ ಮಧ್ಯೆ ಈಗ ಮತ್ತೊಂದು ಅಭಿಯಾನ ಶುರುವಾಗಿದ್ದು, ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಹಿಂದೂಪರ ಸಂಘಟನೆಗಳು ಮುಂದಾಗಿವೆ.
ಹಿಂದೂಪರ ಸಂಘಟನೆಗಳು ಯುಗಾದಿ ಹಬ್ಬದ ಹಿನ್ನಲೇ ಹಲಾಲ್ ಕಟ್, ಅನ್ನು ವಿರೋಧಿಸಿ ಜಟ್ಕಾ ಕಟ್ ಮಾಂಸವನ್ನು ಖರೀದಿಸುವಂತೆ ಅಭಿಯಾನ ನಡೆಸಿದ್ದರು. ಇದರಿಂದ ರಾಜ್ಯದಲ್ಲಿ ಜಟ್ಕಾ ಕಟ್ ಖರೀದಿ ಜೋರಾಗಿ ನಡೆದಿದೆ ಈ ಮೂಲಕ ಅಭಿಯಾನ ಯಶಸ್ವಿಯಾಗಿದೆ. ಈ ಮಧ್ಯೆ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಯುವಂತೆ ಒತ್ತಾಯ ಮಾಡುತ್ತಿವೆ.
ಅಲ್ಲದೇ ಕಾನೂನಾತ್ಮಕವಾಗಿ ಹೋರಾಡಿ ಮಸೀದಿ ಸೌಂಡ್ ಬ್ಯಾನ್ ಮಾಡಲು ಮುಂದಾಗಿದ್ದಾರೆ. ಈ ಕುರಿತಂತೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲು ಹಿಂದೂ ಪರ ಸಂಘಟನೆ ತಯಾರಿ ನಡೆಸಿದೆ.









