ಪ್ರಿಯಕರನ ವಿರುದ್ಧ ದೂರು ದಾಖಲಿಸುವಂತೆ ತಂದೆ ಒತ್ತಾಯ : ವಿಷ ಸೇವಿಸಿದ ಅಪ್ರಾಪ್ತೆ..!
ತನ್ನ ಬಾಯ್ ಫ್ರೆಂಡ್ ವಿರುದ್ಧ ಅತ್ಯಚಾರ ಪ್ರಕರಣ ದಾಖಲಿಸುವಂತೆ ತಂದೆ ಪೀಡಿಸುತ್ತಲೇ ಇದ್ದ ಹಿನ್ನೆಲೆ ಪೊಲೀಸ್ ಠಾಣೆಯಲ್ಲೇ ಅಪ್ರಾಪ್ತೆ ವಿಷ ಕುಡಿದ ಪ್ರಸಂಗ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಬೆಳಕಿಗೆ ಬಂದಿದೆ. ಪ್ರಿಯಕರನನ್ನ ರಕ್ಷಿಸುವ ಸಲುವಾಗಿ 17 ವರ್ಷದ ಅಪ್ರಾಪ್ತ ಹುಡುಗಿ ಪೊಲೀಸ್ ಠಾಣೆಯಲ್ಲೇ ತಂದೆಯೊಂದಿಗೆ ವಾಗ್ವಾದಕ್ಕಿಳಿದ್ದಾಳೆ. ತಂದೆ ಎಷ್ಟೇ ಮನವೊಲಿಸಿದ್ರೂ ಬಗ್ಗದ ಹುಡುಗಿ ಕೊನೆಗೆ ಬಾತ್ ರೂಂ ಗೆ ಹೋಗಿ ಬರೋದಾಗಿ ಹೇಳಿ ವಿಷ ಸೇವಿಸಿದ್ದಾಲೆ. ಮತ್ತೆ ಬಂದು ನೀವು ದೂರು ನೀಡಿ ನಾನ ವಿಷ ಸೇವಿಸಿದ್ದೇನೆ ಎಂದು ತಂದೆಗೆ ಪೊಲೀಸ್ ಸಿಬ್ಬಂದಿಗೆ ಶಾಕ್ ನೀಡಿದ್ದಾಳೆ. ಸದ್ಯ ಅಸ್ವಸ್ಥಗೊಂಡಿದ್ದ ಹುಡುಗಿಯನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ.
ಸ್ವಂತ ಮಗಳ ಮೇಲೆ ತಂದೆಯ ಮೃಗೀಯ ವರ್ತನೆ: ಮಗಳ ಡೈರಿಯಲ್ಲಿತ್ತು ನೋವಿನ ಕಥೆ..!
ಅಂದ್ಹಾಗೆ ಈ ಹುಡುಗಿ ಮೂಲತಃ ಗ್ವಾಲಿಯರ್ ನ ಮೊತಿಜ್ಹೀಲ್ ಕಂಟೋನ್ಮೆಂಟ್ ನ ನಿವಾಸಿ. ಈಕೆ 19 ವರ್ಷದ ರಿಂಕು ಜತಾವ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಸಹ ಒಂದೇ ಏರಿಯಾದ ನಿವಾಸಿಗಳು. ಆದ್ರೆ ಇವರಿಬ್ಬರ ಪ್ರೀತಿ ವಿಚಾರ ಮನೆಯವರಿಗೆ ತಿಳಿದಾಗ ಬೈದು ಬುದ್ದಿವಾದ ಹೇಳಿ ಇದನ್ನೆಲ್ಲ ಬಿಟ್ಟುಬಿಡುವಂತೆ ಹೇಳಿದ್ದಾರೆ. ಆದರೆ ಬಹೊದಾಪುರ್ ಏರಿಯಾದಲ್ಲಿ ನಡೆದ ಮದುವೆ ಸಮಾರಂಭಕ್ಕೆ ತೆರಳಿ ಬಳಿಕ ಅಲ್ಲಿಂದ ಪ್ರಿಯಕರನ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಬಳಿಕ ಹುಡುಗಿಯ ಮನೆಯವರು ರಿಂಕು ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು.
ಮಗಳು ಸ್ನಾನ ಮಾಡುವುದನ್ನು ವಿಡಿಯೋ ಮಾಡ್ತಿದ್ದ ತಂದೆ..!
ಇತ್ತ ಈ ಇಬ್ಬರು ಮೊದಲು ಆಗ್ರಾಗೆ ತೆರಳಿ ಬಳಿಕ ದೆಹಲಿಗೆ ಬಂದು ನೆಲೆಸಿದ್ದರು. ಈ ನಡುವೆ ಇಬ್ಬರ ಬಳಿಯಿದ್ದ ಹಣ ಖಾಲಿಯಾಗಿದ್ದು, ಇಬ್ಬರು ವಾಪಸ್ ಆಗಿದ್ದಾರೆ. ಬಳಿಕ ಈ ಇಬ್ಬರನ್ನೂ ಸಹ ಬಹೊದಾಪುರ್ ಠಾಣೆಗೆ ಕಳುಹಿಸಲಾಗಿದೆ. ಇತ್ತ ಪೊಲೀಸ್ ಠಾಣೆಯಲ್ಲಿ ಹುಡುಗಿ ಹಾಗೂ ತಂದೆಯ ನಡುವೆ ಠಾಣೆಯಲ್ಲೇ ವಾಗ್ವಾದ ಶುರುವಾಗಿದೆ. ರಿಂಕು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ತಂದೆ ಎಷ್ಟೇ ಕೇಳಿಕೊಂಡ್ರು ಮಗಳು ಮಾತ್ರ ಇದಕ್ಕೆ ಒಪ್ಪಿರಲಿಲ್ಲ. ಬಳಿಕ ಬಾತ್ ರೂಮ್ ಗೆ ಹೋಗಿ ವಿಷ ಸೇವಿಸಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel