ಹುಡ್ಗಿ ಕೈ ಕೊಟ್ಟಿದ್ದಕ್ಕೆ ಸಿಕ್ಕ ಸಿಕ್ಕ ಕಾರ್ ಗಳ ಗಾಜು ಪುಡಿಗಟ್ಟಿದ ಯುವಕ
ಬೆಂಗಳೂರು : ಪ್ರೀತಿಸಿದ ಹುಡುಗಿ ಕೈ ಕೊಟ್ಟ ಕಾರಣ ಹುಚ್ಚು ಪ್ರೇಮಿಯೋರ್ವ ಕುಡಿದ ಮತ್ತಿನಲ್ಲಿ ಕಂಡ ಕಂಡ ಕಾರುಗಳ ಗಾಜು ಪುಡಿಗಟ್ಟಿದ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆಸಿದೆ.
ನಿನ್ನೆ ತಡರಾತ್ರಿ 1:30 ಸುಮಾರಿಗೆ ಈ ಘಟನೆ ನಡೆದಿದೆ. ಸದ್ಯ ಪಾಗಲ್ ಪ್ರೇಮಿಯನ್ನು ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ನಿವಾಸಿ ಸತೀಶ್ ಬಂಧಿತ ಆರೋಪಿಯಾಗಿದ್ದಾನೆ.
ಪ್ರೇಮ ವಿಫಲವಾದ ಕಾರಣ ಸತೀಶ್ ಬಸವೇಶ್ವರನಗರದಲ್ಲಿ ಐದು ಕಾರುಗಳು, ಮಹಾಲಕ್ಷ್ಮಿ ಲೇಔಟ್ ನಲ್ಲಿ ಎರಡು ಕಾರ್ ಗಳ ಕಿಟಕಿ ಗಾಜುಗಳು ಜಖಂ ಗೊಳಿಸಿದ್ದಾನೆ.