Love is blind-ಪ್ರಿತಿಗೆ ಕಣ್ಣಿಲ್ಲಾ ..ಪೃಇತಿ ಮಾಡುವವರು ಏನೂ ಬೇಕಾದರೂ ಮಾಡಲೂ ಸದಾ ಸಿದ್ದ ಎಂಬ ಮಾತಿದೆ ಇದಕ್ಕೆ ಆಗಾಗ ಪ್ರಪಂಚದಲ್ಲಿ ನಡೆಯುವ ಕೆಲವು ಘಟನೆಗಳು ಸೂಕ್ತ ನಿದರ್ಷನದಂತೆ ವ್ಯಕ್ತವಾಗುತ್ತವೆ. ಹೌದು ಇದಕ್ಕೆ ಪುಷ್ಟಿನೀಡುವಂತೆ ಪಾಕಿಸ್ತಾನದಲ್ಲಿ ಘಟನೆಯೊಂದು ನಡೆದಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ 60 ವರ್ಷದ ಮಹಿಳೆಯೊಬ್ಬರು ತನಗಿಂತ 30 ವರ್ಷದ ವ್ಯಕ್ತಿಯೊಂದಿಗೆ ಮದುವೆಯಾಗಲು 14,400 ಕಿಮೀ ಪ್ರಯಾಣ ಬೆಳೆಸಿ ಬಂದಿದ್ದರು. ಆ ನಂತರ 73 ವರ್ಷದ ವೃದ್ಧೆಯೊಬ್ಬರು 18ರ ಯುವಕನನ್ನು ವರಿಸಿ, ಫಿಲಿಪೈನ್ಸ್ನಲ್ಲಿ ಮದುವೆಯಾದ್ದರು. ಇದೀಗ ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಜನರನ್ನ ಅಚ್ಚರಿಗೊಳಿಸಿದೆ.
ಈ ಪ್ರೇಮ ಕಹಾನಿಯು ವಿದೇಶದಲ್ಲಿ ನಡೆದಿದ್ದು ನೈಜ ಪ್ರೀತಿಗೆ ಮತ್ತೊಂದು ಸಾಕ್ಷಿಯಾಗಿದೆ. 83 ವರ್ಷದ ವೃದ್ಧೆಯೊಬ್ಬರು ತನ್ನ ಮಗನಿಗಿಂತ ಚಿಕ್ಕ ವಯಸ್ಸಿನ 28 ವರ್ಷದ ಪ್ರಿಯಕರನನ್ನು ವರಿಸಲು ತನ್ನ ದೇಶ ಬಿಟ್ಟು ಮತ್ತೊಂದು ದೇಶಕ್ಕೆ ತೆರಳಿದ್ದಾಳೆ.
83ರ ಬ್ರೋಮಾ ಎಂಬ ಪೋಲೆಂಡಿನ ವೃದ್ಧೆಯು ಪಾಕಿಸ್ತಾನದ 28ರ ಹರೆಯ ಯುವಕ ಹಫೀಜ್ ಮೊಹಮ್ಮದ್ ನದೀಮ್ ನನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಅದಕ್ಕಾಗಿ ತನ್ನ ದೇಶದಿಂದ ಸಾವಿರಾರು ಕಿಮೀ ಪ್ರಯಾಣ ಬೆಳೆಸಿ ಪಾಕಿಸ್ತಾನಕ್ಕೆ ಬಂದಿದ್ದಾರೆ.
ಹಫೀಜ್ ಮೊಹಮ್ಮದ್ ನದೀಮ್ ವೃತ್ತಿಯಲ್ಲಿ ಆಟೋ ಮೆಕ್ಯಾನಿಕ್ ಆಗಿದ್ದು ಬ್ರೋಮಾ 6 ವರ್ಷಗಳ ಹಿಂದೆ ಮೊದಲ ಬಾರಿಗೆ ಭೇಟಿ ಮಾಡಿದ್ದರು. ಕಾಲಕ್ರಮೇಣ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿ ಇದೀಗ ವಿವಾಹದ ಮಟ್ಟಕ್ಕೆ ತಲುಪಿದೆ. ಸಾವಿರಾರು ಕಿಮೀ ದೂರದಿಂದ ಬ್ರೋಮಾ ಮುಸ್ಲಿಂ ಕಾನೂನಿನ ಪ್ರಕಾರವೇ ಕೈಗೆ ಗೋರಂಟಿ ಧರಿಸಿ, ಸಾಂಪ್ರದಾಯಿಕ ಉಡುಗೆಯುಟ್ಟು ಮದುವೆಯಾಗಿದ್ದಾರೆ. ಸದ್ಯ ಇಬ್ಬರ ಮದುವೆ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.








