ಡಾರ್ಲಿಂಗ್ ಕೃಷ್ಣ – ಮಿಲನ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ..
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಸದ್ಯ ಫುಲ್ ಖುಷಿಯಲ್ಲಿದ್ದಾರೆ. ಜೋಡಿಗಳಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 1 ವರ್ಷ ಕಳೆದಿವೆ. ಫೆಬ್ರವರಿ 14 ಕ್ಕೆ ಈ ಜೋಡಿ ಮದುವೆಯಾಗಿ ಮೊದಲ ವಿವಾಹ ವಾರ್ಷಿಕೋತ್ಸನ್ನ ಆಚರಿಸಿಕೊಳ್ಳುತ್ತಿದೆ.
2021 ರ ಫೆಬ್ರವರಿ 14 ಕ್ಕೆ ಈ ಜೋಡಿ ಹಸೆಮಣೆ ಏರಿತ್ತು. ವೃತ್ತಿ ಜೀವನ ಮತ್ತು ದಾಂಪತ್ಯ ಜೀವನ ಎರಡನ್ನು ಈ ಜೋಡಿ ಒಟ್ಟಿಗೆ ನಡೆಸಿಕಂಡು ಹೋಗುತ್ತಿದ್ದಾರೆ. ಜೊತೆ ಜೊತೆಗೆ ಸಾಗುತ್ತ ಜೊಡಿ ಬದುಕು ಕಟ್ಟಿಕೊಳ್ಳುತ್ತಿದೆ.
ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ ಇಂದು ಡಬಲ್ ಸಂಭ್ರಮ ಮದುವೆ ವಾರ್ಷಿಕೋತ್ಸದ ಸಮಯದಲ್ಲೇ ಇವರಿಬ್ಬರು ನಟಿಸಿರುವ ಲವ್ ಮಾಕ್ಟೈಲ್ 2 ರಿಲೀಸ್ ಆಗಿ ತೆರೆಗೆ ಬಂದಿದೆ. ಚಿತ್ರ ಪಾಸಿಟೆವ್ ರೆಸ್ಪಾನ್ಸ್ ಪಡೆದುಕೊಂಡಿದ್ದು ಲವ್ ಮಾಕ್ಟೈಲ್ 2 ಯಶಸ್ಸು ಕಂಡಿದೆ. ಹಲವು ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಈ ದುಪ್ಪಟ್ಟು ಸಂಭ್ರಮದಲ್ಲಿ ಜೋಡಿ ವೆಡ್ಡಿಂಗ್ ಆನಿವರ್ಸರಿ ಮತ್ತು ವ್ಯಾಲೆಂಟೇನ್ ಡೇ ಆಚರಿಸಿಕೊಳ್ಳುತ್ತಿದೆ. 2020 ರಲ್ಲಿ ಲವ್ ಮಾಕ್ಟೈಲ್ ರಿಲೀಸ್ ಆಗಿ ಸಿನಿಮಾ ಯಶಸ್ವಿಯಾ ಬಳಿಕ ಜೋಡಿ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿತ್ತು.
ನಿಮ್ಮ ಜೊತೆ ಜೀವನ ಹಂಚಿಕೊಂಡಿರುವುದು ನನ್ನ ಬದುಕಿನ ಅತ್ಯುತ್ತಮ ನಿರ್ಧಾರ. ನೀವೇ ನನ್ನ ಪ್ರಪಂಚ. ಹ್ಯಾಪಿ ಆ್ಯನಿವರ್ಸರಿ ಡಾರ್ಲಿಂಗ್ ಕೃಷ್ಣ’ ಎಂದು ಮಿಲನಾ ನಾಗರಾಜ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಟ ಮತ್ತು ನಿರ್ದೇಶಕನಾಗಿ ಡಾರ್ಲಿಂಗ್ ಕೃಷ್ಣ ಎರಡು ಬಾರಿ ಗೆದ್ದಿದ್ದಾರೆ. ನಿರ್ಮಾಪಕರಾಗಿ ಮಿಲನ ನಾಗರಾಜ್ ಮೊದಲ ಸಲ ಸಿಹಿ ಕಂಡಿದ್ದಾರೆ.