ಯುವತಿ ಪ್ರೇಮ ನಿವೇದನೆ ಒಪ್ಪದಿದ್ದಕ್ಕೆ ನೀಚ ಕೃತ್ಯವೆಸಗಿದ ಯುವಕ
ತೆಲಂಗಾಣ: ಯುವತಿ ತನ್ನ ಪ್ರೇಮ ನಿವೇದನೆಯನ್ನು ಒಪ್ಪದ ಕಾರಣಕ್ಕೆ ಯುವಕನೋರ್ವ ಯುವತಿಗೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ತೆಲಂಗಾಣದ ವರಂಗಲ್ ಜಿಲ್ಲೆಯ ಹನುಮಕೊಂಡ ಸಮೀಪದ ಗಾಂಧಿ ನಗರದಲ್ಲಿ ನಡೆದಿದೆ.
23 ವರ್ಷದ ಅನುಷಾ ಹಲ್ಲೆಗೊಳಗಾದ ಯುವತಿ. ಅಜರ್ ಹಲ್ಲೆ ಮಾಡಿದ ಆರೋಪಿ. ಗುರುವಾರ ಬೆಳಿಗ್ಗೆ ಘಟನೆ ನಡೆದಿದ್ದು, ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
ನಡೆದಿದ್ದೇನು?: ಕೆಲ ದಿನಗಳಿಂದ ಅಜರ್ ಎಂಬ ಯುವಕ ಅನುಷಾಳನ್ನು ಪ್ರೀತಿಸುತ್ತಿದ್ದ. ಆದರೆ, ಇದಕ್ಕೆ ಅನುಷಾ ಒಪ್ಪಿರಲಿಲ್ಲ. ಮತ್ತೆ ಶುಕ್ರವಾರ ಬೆಳಗ್ಗೆ ಆಕೆ ಬಳಿಗೆ ಹೋಗಿ ಪ್ರೇಮ ಪ್ರಸ್ತಾಪವನ್ನಿಟ್ಟಿದ್ದಾನೆ. ಆಗಲೂ ಸಹ ತಿರಸ್ಕರಿಸಿದ್ದಾಳೆ. ಇದರಿಂದ ಕೋಪಗೊಂಡ ಅಜರ್ ಆಕೆಯ ಕುತ್ತಿಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಕುಸಿದು ಬಿದ್ದು ತೀವ್ರ ರಕ್ತಸ್ರಾವವಾಗಿವೆ.
ಈ ಘಟನೆಯ ವಿಷಯ ತಿಳಿದ ಸ್ಥಳೀಯರು ತಕ್ಷಣವೇ ಗಾಯಾಳು ಅನುಷಾಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಆಕೆಯ ಪರಿಸ್ಥಿತಿ ಗಂಭೀರವಾಗಿದ್ದು, 48 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಗಿದೆ. ಇನ್ನು, ಅನುಷಾ ಎಂಸಿಎ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.