ಏಷ್ಯನ್ ಎಲೈಟ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಭಾರತೀಯರು….
ಜೋರ್ಡಾನ್ ದೇಶದ ಅಮ್ಮನ್ನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಶಿಪ್ನಲ್ಲಿ ಶುಕ್ರವಾರ ಭಾರತದ ಬಾಕ್ಸರ್ಗಳಾದ ಲೊವ್ಲಿನಾ ಬೊರ್ಗೊಹೈನ್, ಪರ್ವೀನ್ ಹೂಡಾ, ಸವೀಟಿ ಮತ್ತು ಅಲ್ಫಿಯಾ ಪಠಾಣ್ ಚಿನ್ನದ ಪದಕಗಳನ್ನ ಮುಡಿಗೇರಿಸಿಕೊಂಡಿದ್ದಾರೆ.
ಭಾರತದ ಪರ್ವೀನ್ ಜಪಾನ್ ನ ಕಿಟೊ ಮಾಯ್ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದರು. ಲೊವ್ಲಿನಾ ಅವರು ಉಜ್ಬೇಕಿಸ್ತಾನದ ರುಜ್ಮೆಟೋವಾ ಸೊಖಿಬಾ ಅವರನ್ನು 5-0 ಅಂತರದಲ್ಲಿ ಸೋಲಿಸಿದರು. ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ನಂತರ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವ 25 ವರ್ಷದ ಲೊವ್ಲಿನಾಗೆ ಈ ಪ್ರಶಸ್ತಿಯು ಉತ್ಸಾಹ ಮತ್ತು ಧೈರ್ಯವನ್ನ ಹೆಚ್ಚಿಸಿದೆ.
ಸವೀಟಿ ಕಜಕಿಸ್ತಾನದ ಗುಲ್ಸಯಾ ಯೆರ್ಜಾನ್ ಅವರನ್ನ 5-0 ಅಂತರದಿಂದ ಸೋಲಿಸಿದರು, ಆದರೆ ಅಲ್ಫಿಯಾ ಅವರು ಚಿನ್ನದ ಪದಕಕ್ಕೆ ಅನರ್ಹಗೊಂಡಿದ್ದರಿಂದ ಜೋರ್ಡಾನ್ನ ಇಸ್ಲಾಂ ಹುಸೈಲಿ ಅವರನ್ನು ಸೋಲಿಸಿದರು.
ಮತ್ತೊಂದೆಡೆ, ಮಿನಾಕ್ಷಿ ಅವರು ಫ್ಲೈವೇಟ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆಯುವ ಮೂಲಕ ತಮ್ಮ ಚೊಚ್ಚಲ ಏಷ್ಯನ್ ಚಾಂಪಿಯನ್ಶಿಪ್ ಅಭಿಯಾನವನ್ನು ಮುಕ್ತಾಯಗೊಳಿಸಿದರು.
ಆರು ಬಾರಿ ಏಷ್ಯನ್ ಪದಕ ವಿಜೇತ ಶಿವ ಥಾಪಾ ಇಂದು ಫೈನಲ್ನಲ್ಲಿ ಉಜ್ಬೇಕಿಸ್ತಾನ್ನ ಅಬ್ದುಲ್ಲಾವ್ ರುಸ್ಲಾನ್ ಅವರನ್ನು ಎದುರಿಸಲಿದ್ದಾರೆ.
Lovlina, Parveen, Saweety and Alfiya strike Gold at Asian Elite Boxing Championships








