ವರ್ಷದ ಆರಂಭದಲ್ಲೇ ಗ್ರಾಹಕರಿಗೆ ಶಾಕ್ ಕೊಟ್ಟ ತೈಲ ಮಾರುಕಟ್ಟೆ ಕಂಪನಿಗಳು – ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ
ಹೊಸದಿಲ್ಲಿ, ಜನವರಿ01: ತೈಲ ಮಾರುಕಟ್ಟೆ ಕಂಪನಿಗಳು ವರ್ಷದ ಆರಂಭದಲ್ಲೇ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಸಿ ಗ್ರಾಹಕರಿಗೆ ಶಾಕ್ ನೀಡಿದೆ.
ಡಿಸೆಂಬರ್ ತಿಂಗಳಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿದ್ದ ಕಂಪನಿಗಳು ಜನವರಿ ತಿಂಗಳಿನ ಅನಿಲ ಬೆಲೆಯನ್ನು ಬಿಡುಗಡೆ ಮಾಡಿದೆ.
ಈಗ ದೆಹಲಿಯಲ್ಲಿ ಸಿಲಿಂಡರ್ ಗೆ 694 ರೂ.ಗೆ (14.2 ಕೆ.ಜಿ) ಸಬ್ಸಿಡಿ ರಹಿತ ಅಡುಗೆ ಅನಿಲ ಮಾರಾಟವಾಗುತ್ತಿದೆ. ವರ್ಷದ ಮೊದಲ ದಿನ ತೈಲ ಕಂಪನಿಗಳು (ಎಚ್ ಪಿಸಿಎಲ್, ಬಿಪಿಸಿಎಲ್, ಐಒಸಿ) ವಾಣಿಜ್ಯ ಸಿಲಿಂಡರ್ ಬೆಲೆಯನ್ನು 56 ರೂ. ಹೆಚ್ಚಿಸಿದ್ದು, 19 ಕೆಜಿ ಎಲ್ ಪಿಜಿ ಅಡುಗೆ ಸಿಲಿಂಡರ್ ಬೆಲೆ 1,332 ರೂ.ನಿಂದ 1,349 ರೂ.ಗೆ ಏರಿಕೆಯಾಗಿದೆ.
19 ಕೆಜಿ ಎಲ್ ಪಿಜಿ ಸಿಲಿಂಡರ್ ನ ಬೆಲೆಯು 17 ರೂ ಆಗಿದ್ದು, 14.2 ಕೆಜಿ ಸಿಲಿಂಡರ್ ಬೆಲೆ 694 ರೂಪಾಯಿ ಆಗಿದೆ.
ಕೋಲ್ಕತ್ತಾದಲ್ಲಿ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,387.50 ರೂ.ನಿಂದ 1,410 ರೂ.ಗೆ ಏರಿಕೆಯಾಗಿದ್ದರೆ, ಸಿಲಿಂಡರ್ ಬೆಲೆಯು 22.50 ರೂ ಗೆ ಏರಿದೆ. ಗೃಹಬಳಕೆಯ ಅನಿಲದ ಬೆಲೆಯು 720.50 ರೂ.ಆಗಿದೆ.
19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯು ಮುಂಬೈನಲ್ಲಿ 1,280.50 ರೂಪಾಯಿಯಿಂದ 1,297.50 ರೂಪಾಯಿಗೆ ಏರಿಕೆಯಾಗಿದ್ದರೆ, ಸಿಲಿಂಡರ್ ಬೆಲೆಯು 17 ರೂಪಾಯಿಗೆ ಏರಿಕೆಯಾಗಿದೆ. 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯು 694 ರೂಪಾಯಿ ಏರಿಕೆಯಾಗಿದೆ.
ಚೆನ್ನೈನಲ್ಲಿ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯು 1,446.50 ರೂ.ನಿಂದ 1,463.50 ರೂ.ಗೆ ಏರಿಕೆಯಾಗಿದೆ. ಸಿಲಿಂಡರ್ ಬೆಲೆಯು 17 ರೂ.ಗೆ ಏರಿಕೆಯಾಗಿದ್ದರೆ, 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 710 ರೂ ಆಗಿದೆ.
ನೀವು ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಹೊಸ ಬೆಲೆಗಳನ್ನು ಸಹ ಪರಿಶೀಲಿಸಬಹುದು. ಅವರು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರತಿ ತಿಂಗಳು ಅಡುಗೆ ಅನಿಲದ ಬೆಲೆಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನಿಮ್ಮ ನಗರದಲ್ಲಿ ಗ್ಯಾಸ್ ಸಿಲಿಂಡರ್ ದರವನ್ನು ಪರಿಶೀಲಿಸಬಹುದು: (https://iocl.com/Products/IndaneGas.aspx)
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಹಲ್ಲುನೋವಿಗೆ ಪರಿಣಾಮಕಾರಿ ಮನೆಮದ್ದುಗಳುhttps://t.co/HhYDoJETEb
— Saaksha TV (@SaakshaTv) December 31, 2020
ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರಾವಧಿ ವಿಸ್ತರಣೆhttps://t.co/1ULNaCtmkJ
— Saaksha TV (@SaakshaTv) December 31, 2020