LSG vs MI | ಕನ್ನಡಿಗ ಕೆ.ಎಲ್.ರಾಹುಲ್ ತುಫಾನ್ ಇನ್ನಿಂಗ್ಸ್ : ಲಕ್ನೋ ಬೃಹತ್ ಮೊತ್ತ

1 min read
lsg-vs-mi- 100 for KL Rahul in his 100th IPL match saaksha tv

LSG vs MI | ಕನ್ನಡಿಗ ಕೆ.ಎಲ್.ರಾಹುಲ್ ತುಫಾನ್ ಇನ್ನಿಂಗ್ಸ್ : ಲಕ್ನೋ ಬೃಹತ್ ಮೊತ್ತ

ಮುಂಬೈನ ಬ್ರೆಬೋರ್ನ್ ಅಂಗಳದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

ಮುಂಬೈ ಇಂಡಿಯನ್ಸ್ ಬೌಲರ್ ಗಳನ್ನು ಚೆಂಡಾಡಿದ ಲಕ್ನೋ ನಾಯಕ ಆಕರ್ಷಕ ಶತಕ ಸಿಡಿಸಿ ಮಿಂಚಿದರು.

ಕೆ.ಎಲ್. ರಾಹುಲ್ ತುಫಾನಿ ಇನ್ನಿಂಗ್ಸ್ ನಲ್ಲಿ ಐದು ಭರ್ಜರಿ ಸಿಕ್ಸರ್, ಒಂಭತ್ತು ಬೌಂಡರಿ ಸಹಿತ 103 ರನ್ ಸಿಡಿಸಿದ್ದಾರೆ.

ಪರಿಣಾಮ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದೆ.

ಟಾಸ್ ಸೋತು ಬ್ಯಾಟ್ ಮಾಡಿದ ಕೆ.ಎಲ್. ರಾಹುಲ್, ಕ್ವಿಂಟಲ್ ಡಿ ಕಾಕ್ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿದರು. ಡಿ ಕಾಕ್ 24 ರನ್ ಗಳಿಗೆ ಅಲೆನ್ ಗೆ ವಿಕೆಟ್ ಒಪ್ಪಿಸಿದರು.

lsg-vs-mi- 100 for KL Rahul in his 100th IPL match saaksha tv

ಇದಾದ ಬಳಿಕ ಮನೀಷ್ ಪಾಂಡೆ ಜೊತೆ ಸೇರಿದ ರಾಹುಲ್ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಈ ಹಂತದಲ್ಲಿ 38 ರನ್ ಗಳಿಸಿದ್ದ ಮನೀಷ್ ಮುರುಗನ್ ಅಶ್ವಿನ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು.

ನಂತರ ಬಂದ ಮಾರ್ಕಸ್ ಸ್ಟೋಯ್ನಿಸ್ 10 ರನ್, ದೀಪ್ ಹೂಡ 15 ರನ್ ಸಿಡಿಸಿದರು. ಕೊನೆಯ ಓವರ್ ವರೆಗೂ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ ಸೆಂಚೂರಿ ಸಿಡಿಸಿ ಮಿಂಚಿದರು.  

ಪರಿಣಾಮ ಲಕ್ನೋ ಸೂಪರ್ ಜೈಂಟ್ಸ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದೆ. ಆ ಮೂಲಕ ಮುಂಬೈಗೆ 200 ರನ್ ಗಳ ಟಾರ್ಗೆಟ್ ನೀಡಿದೆ.

ಮುಂಬೈ ಪರ ಉನಾದ್ಕಟ್ 2 ರನ್, ಮುರುಗನ್ ಅಶ್ವಿನ್ 1, ಅಲೆನ್ 1 ವಿಕೆಟ್ ಪಡೆದರು.  lsg-vs-mi- 100 for KL Rahul in his 100th IPL match

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd