LSG vs PBKS Match | ಸ್ನೇಹಿತರ ಸಮರದಲ್ಲಿ ಸೋತ “ಕಿಂಗ್ಸ್”
ಸ್ನೇಹಿತರ ಸೆಣಸಾಟದಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಯಾಂಕ್ ಅಗರ್ ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ವಿರುದ್ಧ 20 ರನ್ ಗಳಿಂದ ಗೆಲುವು ಸಾಧಿಸಿದೆ.
ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇ ಆಫ್ಸ್ ಗೆ ಮತ್ತಷ್ಟು ಹತ್ತಿರವಾಗಿದೆ.
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, 20 ಓವರ್ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 153 ರನ್ ಗಳಿಸಿದರು.
ಈ ಪೈಪೋಟಿಯ ಮೊತ್ತ ಬೆನ್ನತ್ತಿದ ಪಂಜಾಬ್ ಕಿಂಗ್ಸ್, 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್ಗಳಿಸುವ ಮೂಲಕ 20 ರನ್ಗಳ ಸೋಲೊಪ್ಪಿಕೊಂಡಿತು.
ಲಕ್ನೋ ನೀಡಿದ 154 ರನ್ಗಳ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್, ಶಿಖರ್ ಧವನ್ ಉತ್ತಮ ಅಡಿಪಾಯ ಹಾಕಿಕೊಡಲಿಲ್ಲ.
ಮಯಾಂಕ್ 25ಕ್ಕೆ ಔಟ್ ಆದ್ರೆ ಧವನ್ 5 ರನ್ ಗಳಿಗೆ ಸುಸ್ತಾದ್ರು. ನಂತರ ಕಣಕ್ಕಿಳಿದ ಜಾನಿ ಬೈರ್ಸ್ಟೋವ್ 32 ರನ್ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಬಂದ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಮುಗ್ಗರಿಸಿದರು.
ಬನುಕಾ ರಾಜಪಕ್ಸ(9), ಲಿಯಾಮ್ ಲಿವಿಂಗ್ಸ್ಟೋನ್(18), ಜಿತೇಶ್ ಶರ್ಮ(2), ಕಗೀಸೋ ರಬಾಡ(2), ರಾಹುಲ್ ಚಹರ್(4) ಉತ್ತಮ ಪ್ರದರ್ಶನ ನೀಡುವಲ್ಲಿ ಮುಗ್ಗರಿಸಿದರು.

ರಿಷಿ ಧವನ್ (21*) ರನ್ಗಳಿಸಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಲಕ್ನೋ ಸೂಪರ್ ಜೈಂಟ್ಸ್ಗೆ ಬೌಲರ್ಗಳು ಸಾಂಘಿಕ ಪ್ರದರ್ಶನದ ಮೂಲಕ ಆಸರೆಯಾದರು.
ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ಮೊಸಿನ್ ಖಾನ್ ಮೂರು ವಿಕೆಟ್ ಪಡೆದ್ರೆ, ಕೃನಾಲ್ ಪಾಂಡ್ಯ, ದುಶ್ಮಂತಾ ಚಮೀರ ತಲಾ 2 ವಿಕೆಟ್ ಪಡೆದರು.
ಇನ್ನು ಇದಕ್ಕೂ ಮುನ್ನಾ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ.
ಇನ್ನಿಂಗ್ಸ್ ಆರಂಭಿಸಿದ ನಾಯಕ ಕೆ.ಎಲ್. ರಾಹುಲ್ 6 ರನ್ ಸಿಡಿಸಿ ಬಹುಬೇಗನೆ ನಿರ್ಗಮಿಸಿದರು.
ನಂತರ ಜೊತೆಯಾದ ಕ್ವಿಂಟನ್ ಡಿಕಾಕ್ – ದೀಪಕ್ ಹೂಡಾ ಜೋಡಿ 85 ರನ್ ಗಳ ಜೊತೆಯಾಟ ನೀಡಿದರು.
ಡಿ ಕಾಕ್ 46 ರನ್, ದೀಪಕ್ ಹೂಡ 34 ರನ್ ಗಳಿಸಿದರು. ನಂತರ ಕಣಕ್ಕಿಳಿದ ಕೃನಾಲ್ ಪಾಂಡ್ಯ(7), ಸ್ಟಾಯ್ನಿಸ್(6), ಬಡೋನಿ(4) ಹಾಗೂ ಜೇಸನ್ ಹೋಲ್ಡರ್(11) ಬಹುಬೇಗನೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಕೊನೆಯಲ್ಲಿ ದುಶ್ಮಂತ ಚಮೀರ(17), ಮೊಸಿನ್ ಖಾನ್(13*) ಹಾಗೂ ಆವೇಶ್ ಖಾನ್(2) ಉಪಯುಕ್ತ ರನ್ ಕಲೆಹಾಕಿದರು.
ಪಂಜಾಬ್ ಕಿಂಗ್ಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕಗೀಸೋ ರಬಾಡ ನಾಲ್ಕು ವಿಕೆಟ್ ಪಡೆದರು.
lsg-vs-pbks-match-Lucknow defeat Punjab by 20 runs








