ಗ್ರೀನ್ ಹೈಡ್ರೋಜನ್ ಅಭಿವೃದ್ಧಿಗೆ ಐಐಟಿ ಬಾಂಬೆಯೊಂದಿಗೆ ಕೈಜೋಡಿಸಿದ (L&T) ಕಂಪನಿ
ನವದೆಹಲಿ: ಗ್ರೀನ್ ಹೈಡ್ರೋಜನ್ ಮೌಲ್ಯ ಸರಪಳಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಲಾರ್ಸೆನ್ & ಟೂಬ್ರೊ (L&T) ಜಂಟಿಯಾಗಿ ಮುಂದಾಗಿವೆ.
ಈ ಸಂಬಂಧ ಎರಡು ಕಂಪನಿಗಳು ಐಐಟಿ ಬಾಂಬೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತದಲ್ಲಿ ಗ್ರೀನ್ ಹೈಡ್ರೋಜನ್ ಉದ್ಯಮದ ಅಭಿವೃದ್ಧಿಗೆ ಕೊಡುಗೆ ನೀಡಲು ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಎರಡೂ ಸಂಸ್ಥೆಗಳು ಕೈಜೋಡಿಸಿವೆ.
“L&T ಯ ಇಂಜಿನಿಯರಿಂಗ್ ಪರಿಣತಿ, ಉತ್ಪನ್ನದ ಸ್ಕೇಲ್-ಅಪ್ ಮತ್ತು ವಾಣಿಜ್ಯೀಕರಣದ ಜ್ಞಾನ ಮತ್ತು ಹೈಡ್ರೋಜನ್ ತಂತ್ರಜ್ಞಾನಗಳಲ್ಲಿ IIT ಬಾಂಬೆಯ ಅತ್ಯಾಧುನಿಕ ಸಂಶೋಧನೆಯು ಈ ಪಾಲುದಾರಿಕೆ ತನ್ನ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ” ಎಂದು ಕಂಪನಿ ಹೇಳಿದೆ.
“ನಮ್ಮ ಪಾಲುದಾರರು ಮತ್ತು ಗ್ರಾಹಕರು ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹಸಿರು ಹೈಡ್ರೋಜನ್ ಅನ್ನು ಕೈಗಾರಿಕೀಕರಣಗೊಳಿಸಲು ನಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಐಐಟಿ ಬಾಂಬೆ ಮತ್ತು ಅದರ ವಿಶ್ವದರ್ಜೆಯ ತಂತ್ರಜ್ಞರೊಂದಿಗಿನ ಈ ಸಹಯೋಗವು ಸ್ಥಳೀಯ ಜಾಗತಿಕವಾಗಿ ಸ್ಪರ್ಧಾತ್ಮಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಬೆಂಬಲಿಸುತ್ತದೆ ಮತ್ತು ಗ್ರೀನ್ ಹೈಡ್ರೋಜನ್ ತಂತ್ರಜ್ಞಾನದಲ್ಲಿ ಭಾರತವನ್ನು ಆತ್ಮನಿರ್ಭರದೆಡೆಗೆ ತೆಗೆದುಕೊಂಡು ಹೋಗುತ್ತದೆ” ಎಂದಿದೆ.