ಲಕ್ನೋ, ಅಹ್ಮದಾಬಾದ್ ಹೊಸ ಐಪಿಎಲ್ ತಂಡಗಳು, 12,715 ಕೋಟಿ ಬಾಚಿದ ಬಿಸಿಸಿಐ..!
ಐಪಿಎಲ್ ನ 2 ಹೊಸ ತಂಡಗಳು ಯಾವುದು ಅನ್ನುವ ಗುಟ್ಟು ರಟ್ಟಾಗಿದೆ. ಬಿಸಿಸಿಐ ಬಿಡ್ ಗೆದ್ದಿರುವ RPSG Ventures LTD ಮತ್ತು CVC Capital Partners ಹೊಸ ಐಪಿಎಲ್ ತಂಡಗಳ ಮಾಲೀಕರಾಗಿದ್ದಾರೆ. ಲಕ್ನೋ ಮತ್ತು ಅಹ್ಮದಾಬಾದ್ ಐಪಿಎಲ್ ನ ಎರಡು ಹೊಸ ತಂಡಗಳಾಗಿವೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಬಿಡ್ ನಲ್ಲಿ 22 ಕ್ಕೂ ಅಧಿಕ ಬಿಡ್ದಾರರು ಪಾಲ್ಗೊಂಡಿದ್ದರು. ಆದರೆ ಅಂತಿಮವಾಗಿ ಅತೀ ಹೆಚ್ಚು ಬಿಡ್ ಸಲ್ಲಿಸಿದ್ದ RPSG Ventures LTD ಮತ್ತು CVC Capital Partners ಐಪಿಎಲ್ ತಂಡಗಳನ್ನು ಗೆದ್ದಿವೆ.RPSG Ventures LTD ಲಕ್ನೋ ಫ್ರಾಂಚೈಸಿಗಾಗಿ 7090 ಕೋಟಿಗಳನ್ನು ಬಿಡ್ ಮಾಡಿತ್ತು. ಇದು ಬಿಸಿಸಿಐ ನಿರೀಕ್ಷೆಗಿಂತಲೂ ಹೆಚ್ಚಿನ ಮೊತ್ತವಾಗಿತ್ತು. ಈ ಹಿಂದೆ RPSG Ventures LTD ರೈಸಿಂಗ್ ಪುಣೆ ತಂಡದ ಮಾಲೀಕರಾಗಿದ್ದರು. 2 ವರ್ಷಗಳ ಕಾಲ RPSG Ventures LTD ಫ್ರಾಂಚೈಸಿಯನ್ನು ಪಡೆದಿತ್ತು.
CVC Capital Partners ಲಕ್ನೋ ತಂಡವನ್ನು ಪಡೆದಿದೆ. ಇದಕ್ಕಾಗಿ 5625 ಕೋಟಿ ರೂಪಾಯಿ ಬಿಡ್ ಸಲ್ಲಿಸಿತ್ತು. ಎರಡು ಫ್ರಾಂಚೈಸಿ ಬಿಡ್ಗಳಿಂದ ಬಿಸಿಸಿಐ 12, 715 ಕೋಟಿ ರೂಪಾಯಿಗಳನ್ನು ಬಾಚಿದೆ. ಬಿಸಿಸಿಐ ಖಜಾನೆ ಐಪಿಎಲ್ ಫ್ರಾಂಚೈಸಿ ಫೀಸ್ ನಿಂದಲೇ ತುಂಬಿ ತುಳುಕುತ್ತಿದೆ.