ಡ್ಯಾನ್ಸ್ ಮಾಡದಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ವಪ್ನಾ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್ ..!

1 min read

ಬಗ್ ಬಾಸ್ ಮಾಜಿ ಸ್ಪರ್ಧಿ ಸ್ವಪ್ನಾ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ..!

ಲಕ್ನೋ : ಹಿಂದಿ ಬಿಗ್ ಬಾಸ್ 10ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ , ಕಾಂಟ್ರವರ್ಸಿಯಿಂದಲೇ ಸುದ್ದಿಯಾಗ್ತಿದ್ದ ಜನಪ್ರಿಯ ಡ್ಯಾನ್ಸರ್ ಸ್ವಪ್ನ ಚೌಧರಿ ವಿರುದ್ಧ ಇದೀಗ ಲಕ್ನೋ ನ್ಯಾಯಾಲಯವು ಅರೆಸ್ಟ್ ವಾರೆಂಟ್ ಹೊರೆಡಿಸಿದೆ..   ಸ್ವಪ್ನಾ ಕಾರ್ಯಕ್ರಮವೊಂದನ್ನು ನಡೆಸಿಕೊಡುವುದಾಗಿ ಒಪ್ಪಿಕೊಂಡು ಹಣ ಪಡೆದು, ನಂತರ ಕಾರ್ಯಕ್ರಮಕ್ಕೂ ಹೋಗದೇ ಹಣವನ್ನೂ ನೀಡದೇ ಇರುವ ಆರೋಪವನ್ನು  ಎದುರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. ಹೀಗಾಗಿ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕವಾದ ನ.22ರೊಳಗೆ ಆದೇಶವನ್ನು ಕಾರ್ಯಗತಗೊಳಿಸುವಂತೆ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ಶಾಂತನು ತ್ಯಾಗಿ ಅವರು ಪೊಲೀಸರಿಗೆ ಸೂಚಿಸಿದ್ದಾರೆ. ಇನ್ನೂ ತನ್ನ ವಿರುದ್ಧದ ಎಫ್‍ಐಆರ್ ಅನ್ನು ರದ್ದುಗೊಳಿಸುವಂತೆ ಸಪ್ನ ಚೌಧರಿ   ಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ನಾನಿ ಜೊತೆಗೆ `ಬೇಬಮ್ಮ ಲಿಪ್ ಲಾಕ್’

ನೃತ್ಯ ಕಾರ್ಯಕ್ರಮವೊಂದನ್ನು ನಡೆಸಿಕೊಡಲು ಸಪ್ನ ಚೌಧರಿ ಅವರು ಸಂಭಾವನೆಯನ್ನು ಪಡೆದಿದ್ದರು. ಕಾರ್ಯಕ್ರಮದಲ್ಲಿ ಚೌಧರಿ ಅವರು ಸರಿಯಾದ ಸಮಯಕ್ಕೆ ಬಂದಿಲ್ಲ. ಸಾವಿರಾರು ಜನ ಸಪ್ನ ಅವರ ನೃತ್ಯ ನೋಡಲು ತಲಾ 300 ರೂ. ನಂತೆ ಟಿಕೆಟ್ ಖರೀದಿಸಿ ನೆರೆದಿದ್ದರು.  ಆದರೆ ಆಕೆ ಕಾರ್ಯಕ್ರಮಕ್ಕೆ ಬರಲಿಲ್ಲ. ಅಲ್ಲದೇ ಕಾರ್ಯಕ್ರಮದ ಹಣವನ್ನೂ ಹಿಂದಿರುಗಿಸಿಲ್ಲ ಎಂದು ಆರೋಪಿಸಲಾಗಿದೆ..

‘ಲಾಲ್ ಸಿಂಗ್ ಚಡ್ಡಾ’ ಜೊತೆಗೆ ಓಟಿಟಿಗೆ ನಾಗಚೈತನ್ಯ…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd