ಲಕ್ನೋ: ತಮ್ಮ ಶಾಲೆಯ ಏಳಿಗೆಗಾಗಿ ಪಾಪಿಗಳು ವಿದ್ಯಾರ್ಥಿಯನ್ನೇ ಬಲಿ ಕೊಟ್ಟಿರು ಘಟನೆ ನಡೆದಿದೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ (Hathras) ಈ ಭಯಾನಕ ಘಟನೆ ನಡೆದಿದೆ. ರಸಗವಾನ್ ಎಂಬ ಪ್ರದೇಶದಲ್ಲಿದ್ದ ಡಿ.ಎಲ್ ಪಬ್ಲಿಕ್ ಶಾಲೆಯ ಯಶಸ್ಸಿಗಾಗಿ ಶಿಕ್ಷಕರು ಹಾಗೂ ಆಡಳಿತ ಮಂಡಳಿ 11 ವರ್ಷದ ಭಾಲಕನನ್ನು ನರ ಬಲಿ ಕೊಟ್ಟಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಾಲೆಯ ಮಾಲೀಕ ಜಸೋಧನ್ ಸಿಂಗ್ ಎಂಬಾತ ತನ್ನ ಕುಟುಂಬ, ಶಾಲೆ ಬೆಳೆಯಲಿ ಎಂಬ ನಿಟ್ಟಿನಲ್ಲಿ ಶಾಲೆಯ ಹಾಸ್ಟೆಲ್ ನಿಂದ ವಿದ್ಯಾರ್ಥಿಯನ್ನು ಅಪಹರಿಸಿ, ನರಬಲಿ ಕೊಟ್ಟಿದ್ದಾನೆ. ಆದರೆ, ಈ ವಿಷಯ ಗೊತ್ತಾಗಿ ಕುಟುಂಬಸ್ಥರು ಬಂದಿದ್ದಾರೆ. ಆಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಹೇಳಿದ್ದಾರೆ. ಆಗ ವಿಚಾರಣೆ ನಡೆಸಿದಾಗ ಎಲ್ಲವೂ ಬಯಲಾಗಿದೆ.
ಸದ್ಯ ಪೊಲೀಸರು ಈ ಕುರಿತು ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಜಸೋಧನ್ ಸಿಂಗ್, ಆತನ ಮಗ ನಿರ್ದೇಶಕ ದಿನೇಶ್ ಬಾಘೇಲ್, ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್ ಮತ್ತು ಇತರ ಇಬ್ಬರು ಶಿಕ್ಷಕರಾದ ರಾಮಪ್ರಕಾಶ್ ಸೋಲಂಕಿ ಮತ್ತು ವೀರಪಾಲ್ ಸಿಂಗ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.