ADVERTISEMENT
Sunday, May 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

APP | ದಲಿತ ನಾಯಕ ಎಂ.ಅರವಿಂದ್ ಎಎಪಿ ಸೇರ್ಪಡೆ

Mahesh M Dhandu by Mahesh M Dhandu
March 9, 2022
in Newsbeat, Politics, ರಾಜಕೀಯ
M.Aravind joins AAM ADMI PARTY saaksha tv
Share on FacebookShare on TwitterShare on WhatsappShare on Telegram

APP | ದಲಿತ ನಾಯಕ ಎಂ.ಅರವಿಂದ್ ಎಎಪಿ ಸೇರ್ಪಡೆ

ಬೆಂಗಳೂರು : ಮೂರು ದಶಕಗಳಿಂದ ದಲಿತರು ಹಾಗೂ ಶೋಷಿತರ ಧ್ವನಿಯಾಗಿ ಹೋರಾಡುತ್ತಿರುವ ಎಂ.ಅರವಿಂದ್‌ರವರ ಸೇರ್ಪಡೆಯಿಂದ ರಾಜ್ಯದಲ್ಲಿ ಆಮ್‌ ಆದ್ಮಿ ಪಾರ್ಟಿಯು ಮತ್ತಷ್ಟು ಸದೃಢಗೊಂಡಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

Related posts

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ: ಗ್ರೇಡ್ ಪದ್ಧತಿ ಕೈಬಿಟ್ಟು ಅಂಕ ನೀಡಲು ತೀರ್ಮಾನ – ಸಚಿವ ಮಧು ಬಂಗಾರಪ್ಪ ಅಧಿಕೃತ ಘೋಷಣೆ

ಪರೀಕ್ಷಾ ವ್ಯವಸ್ಥೆ ಹಾಳು ಮಾಡಿದ BJP: ಮಧು ಬಂಗಾರಪ್ಪ ವಾಗ್ದಾಳಿ

May 16, 2026
ಕಿಂಗ್ ಫಿಶರ್ ಮತ್ತು ಬ್ಲ್ಯಾಕ್ ಲೇಬಲ್ ಇನ್ನು ಅಗ್ಗ ರಾಜ್ಯದಲ್ಲಿ ಜಾರಿಯಾದ ಹೊಸ ಅಬಕಾರಿ ನೀತಿ

ಕಿಂಗ್ ಫಿಶರ್ ಮತ್ತು ಬ್ಲ್ಯಾಕ್ ಲೇಬಲ್ ಇನ್ನು ಅಗ್ಗ ರಾಜ್ಯದಲ್ಲಿ ಜಾರಿಯಾದ ಹೊಸ ಅಬಕಾರಿ ನೀತಿ

May 16, 2026

ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಅರವಿಂದ್‌ರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಪೃಥ್ವಿ ರೆಡ್ಡಿ, “ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಕೆಲವು ಜಾತಿಗಳು ಹಾಗೂ ಧರ್ಮಗಳಿಗೆ ಸೀಮಿತವಾಗಿವೆ. ಆದರೆ ಎಎಪಿಯು ಜಾತಿ ಧರ್ಮಗಳ ಭೇದವಿಲ್ಲದೇ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ. ಒಬ್ಬ ಬಡ ದಲಿತನ ಮಗ ಹಾಗೂ ಉನ್ನತ ಅಧಿಕಾರಿಯ ಮಗ ಒಂದೇ ಶಾಲೆಯಲ್ಲಿ ಅಕ್ಕಪಕ್ಕ ಕುಳಿತು ಪಾಠ ಕಲಿಯುವಂತಾಗಬೇಕು ಎಂದು ಬಾಬಾಸಾಹೇಬ್‌ ಅಂಬೇಡ್ಕರ್‌ ಕನಸು ಕಂಡಿದ್ದರು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಅಂಬೇಡ್ಕರ್‌ ಕನಸನ್ನು ದೆಹಲಿಯ ಎಎಪಿ ಸರ್ಕಾರ ನನಸು ಮಾಡುತ್ತಿದೆ” ಎಂದು ಹೇಳಿದರು.

ಎಂ.ಅರವಿಂದ್‌ ಮಾತನಾಡಿ, “ಪಾರದರ್ಶಕತೆ, ಜನಪರ ಕಾಳಜಿ, ಸಮಾನತೆಯಲ್ಲಿ ನಂಬಿಕೆ ಹೊಂದಿರುವ ಹಾಗೂ ಇದನ್ನು ದೆಹಲಿಯಲ್ಲಿ ಸಾಧಿಸಿ ತೋರಿಸಿರುವ ಆಮ್‌ ಆದ್ಮಿ ಪಾರ್ಟಿಯಿಂದ ಮಾತ್ರ ದಲಿತರ ಪ್ರಗತಿ ಸಾಧ್ಯ. ಪಕ್ಷವು ಕರ್ನಾಟಕದಲ್ಲಿ ಬಲಗೊಂಡು ಶೀಘ್ರವೇ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇಲ್ಲದಿದ್ದರೆ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಮಾಡಿ ದಲಿತರು, ಬಡವರು, ಶೋಷಿತರು ಕಷ್ಟದಲ್ಲಿಯೇ ಬದುಕುವಂತೆ ಮಾಡುತ್ತವೆ” ಎಂದು ಹೇಳಿದರು.

M.Aravind joins AAM ADMI PARTY saaksha tv

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷರಾದ ಮೋಹನ್‌ ದಾಸರಿ ಮಾತನಾಡಿ, “ರಾಜ್ಯವನ್ನಾಳಿದ ಮೂರೂ ಪಕ್ಷಗಳಿಂದ ದಲಿತರು ಸೇರಿದಂತೆ ಯಾರಿಗೂ ಏನೂ ಲಾಭವಿಲ್ಲ. ಅವೆಲ್ಲವೂ ತಮ್ಮ ಪಕ್ಷದ ನಾಯಕರ ಜೇಬು ತುಂಬಿಸಿಕೊಳ್ಳುವುದಕ್ಕಾಗಿಯೇ ಇರುವ ಪಕ್ಷಗಳು. ಇದನ್ನು ಅರ್ಥ ಮಾಡಿಕೊಂಡು ಎಲ್ಲ ವರ್ಗಗಳ ಜನರು ಆಮ್‌ ಆದ್ಮಿ ಪಾರ್ಟಿ ಸೇರುತ್ತಿರುವುದು ಆಶಾದಾಯಕ ಬೆಳವಣಿಗೆ” ಎಂದು ಹೇಳಿದರು.

1990ರ ದಶಕದಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷರಾಗಿ ಸಮಾಜಮುಖಿ ಕೆಲಸ ಆರಂಭಿಸಿದ ಎಂ.ಅರವಿಂದ್‌ರವರು ನಂತರ ಭೀಮ್‌ ಮಾರ್ಚ್ ಸಂಘಟನೆ ಹಾಗೂ ಸಮತಾ ಸೈನಿಕ ದಳದ ಉನ್ನತ ಹುದ್ದೆ ಅಲಂಕರಿಸಿ ದಲಿತರ ಹಕ್ಕುಗಳಿಗಾಗಿ ಹೋರಾಡಿದ್ದರು. 1996ರಲ್ಲಿ ರಾಮ್ ವಿಲಾಸ್‌ ಪಾಸ್ವಾನ್‌ ಜೊತೆ ಗುರುತಿಸಿಕೊಂಡು, ಅವರ ನೇತೃತ್ವದ ದಲಿತ ಸೇನಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಭೂಮಿಯಿಲ್ಲದವರಿಗೆ ಭೂಮಿ ಕೊಡಿಸುವ ಹೋರಾಟಗಾರರಾಗಿ, ಎಸ್‌ಸಿ-ಎಸ್‌ಟಿ ವಿಚಕ್ಷನಾ ಸಮಿತಿಯ ಸದಸ್ಯರಾಗಿ, ರೈಲ್ವೆ ನೇಮಕಾತಿ ಮಂಡಳಿಯ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಕೊರೊನಾ ಸಮಯದಲ್ಲಿ ಕಲಘಟಗಿ, ಅಳ್ನಾವರ ಮತ್ತು ಧಾರವಾಡ ತಾಲೂಕುಗಳಲ್ಲಿ ಉಚಿತ ವೈದ್ಯಕೀಯ ನೆರವು ಕಲ್ಪಿಸಿ ನೆರವಾಗಿದ್ದರು.

ಎಎಪಿಯ ಮುಖಂಡರಾದ ನಂಜಪ್ಪ ಕಾಳೇಗೌಡ, ಜಗದೀಶ್‌ ವಿ ಸದಂ, ವಿಜಯ್‌ ಶಾಸ್ತ್ರಿಮಠ್‌, ದರ್ಶನ್‌ ಜೈನ್‌, ಬಿ.ಟಿ.ನಾಗಣ್ಣ ಮತ್ತಿತರ ನಾಯಕರು, ಅರವಿಂದ್‌ರವರ ಆಪ್ತರು ಹಾಗೂ ಎಎಪಿ ಕಾರ್ಯಕರ್ತರು ಭಾವಹಿಸಿದ್ದರು. M.Aravind joins AAM ADMI PARTY

Tags: #Saaksha TVaam admi partyapp
ShareTweetSendShare
Join us on:

Related Posts

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ: ಗ್ರೇಡ್ ಪದ್ಧತಿ ಕೈಬಿಟ್ಟು ಅಂಕ ನೀಡಲು ತೀರ್ಮಾನ – ಸಚಿವ ಮಧು ಬಂಗಾರಪ್ಪ ಅಧಿಕೃತ ಘೋಷಣೆ

ಪರೀಕ್ಷಾ ವ್ಯವಸ್ಥೆ ಹಾಳು ಮಾಡಿದ BJP: ಮಧು ಬಂಗಾರಪ್ಪ ವಾಗ್ದಾಳಿ

by Shwetha
May 16, 2026
0

ಮಧು ಬಂಗಾರಪ್ಪ ಅವರು BJP ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ಅನಗತ್ಯ ಗಲಾಟೆ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಪಾರದರ್ಶಕ ಹಾಗೂ...

ಕಿಂಗ್ ಫಿಶರ್ ಮತ್ತು ಬ್ಲ್ಯಾಕ್ ಲೇಬಲ್ ಇನ್ನು ಅಗ್ಗ ರಾಜ್ಯದಲ್ಲಿ ಜಾರಿಯಾದ ಹೊಸ ಅಬಕಾರಿ ನೀತಿ

ಕಿಂಗ್ ಫಿಶರ್ ಮತ್ತು ಬ್ಲ್ಯಾಕ್ ಲೇಬಲ್ ಇನ್ನು ಅಗ್ಗ ರಾಜ್ಯದಲ್ಲಿ ಜಾರಿಯಾದ ಹೊಸ ಅಬಕಾರಿ ನೀತಿ

by Shwetha
May 16, 2026
0

ರಾಜ್ಯದ ಮದ್ಯಪ್ರಿಯರಿಗೆ ಕರ್ನಾಟಕ ಅಬಕಾರಿ ಇಲಾಖೆಯು ಅತ್ಯಂತ ಪ್ರಮುಖ ಸುದ್ದಿಯೊಂದನ್ನು ನೀಡಿದೆ. ರಾಜ್ಯದಲ್ಲಿ ನೂತನ ಅಬಕಾರಿ ನೀತಿಯು ಜಾರಿಗೆ ಬಂದಿದ್ದು ಇದರ ಪರಿಣಾಮವಾಗಿ ಮದ್ಯದ ಮಾರುಕಟ್ಟೆಯಲ್ಲಿ ದೊಡ್ಡ...

ಐಐಟಿ–ಎನ್‌ಐಟಿ ವಿದ್ಯಾರ್ಥಿಗಳಿಗೆ ಶಾಕ್..! ಒರಾಕಲ್ ಕ್ಯಾಂಪಸ್ ಆಫರ್‌ ರದ್ದು

ಐಐಟಿ–ಎನ್‌ಐಟಿ ವಿದ್ಯಾರ್ಥಿಗಳಿಗೆ ಶಾಕ್..! ಒರಾಕಲ್ ಕ್ಯಾಂಪಸ್ ಆಫರ್‌ ರದ್ದು

by Shwetha
May 16, 2026
0

ಅಮೆರಿಕ ಮೂಲದ ಟೆಕ್ ದಿಗ್ಗಜ ಒರಾಕಲ್ ಕಾರ್ಪೊರೇಷನ್ ಸಂಸ್ಥೆ ಮತ್ತೊಮ್ಮೆ ದೊಡ್ಡ ಸುದ್ದಿಗೆ ಕಾರಣವಾಗಿದೆ. ಇತ್ತೀಚೆಗಷ್ಟೇ 30,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇಆಫ್ ಮಾಡಿದ್ದ ಕಂಪನಿ, ಇದೀಗ ಭಾರತದ...

ದಳಪತಿ ಮನೆಗೆ ಜಿಟಿಡಿ ದಿಢೀರ್ ಭೇಟಿ: ಕೈ ಸೇರ್ಪಡೆ ವದಂತಿಗೆ ಬ್ರೇಕ್ ಹಾಕಿದ ಚಾಮುಂಡೇಶ್ವರಿ ಹುಲಿ!

ದಳಪತಿ ಮನೆಗೆ ಜಿಟಿಡಿ ದಿಢೀರ್ ಭೇಟಿ: ಕೈ ಸೇರ್ಪಡೆ ವದಂತಿಗೆ ಬ್ರೇಕ್ ಹಾಕಿದ ಚಾಮುಂಡೇಶ್ವರಿ ಹುಲಿ!

by Shwetha
May 16, 2026
0

ಬೆಂಗಳೂರು: ಕಳೆದ ಹಲವು ದಿನಗಳಿಂದ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದು, ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳಿಗೆ ಗುರಿಯಾಗಿದ್ದ ಹಿರಿಯ ನಾಯಕ ಜಿ.ಟಿ.ದೇವೇಗೌಡ ಅವರು ನಿನ್ನೆ ಮಹತ್ವದ...

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

by Shwetha
May 16, 2026
0

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ದಶಕಗಳ ಕಾಲ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಪತನಗೊಂಡಿದ್ದು, ಬಿಜೆಪಿ ಐತಿಹಾಸಿಕ ಜಯಭೇರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram