ಎಮ್.ಎಸ್. ಧೋನಿ.. ಕ್ರಿಕೆಟಿಗನಲ್ಲ.. ಈಗ ಪಕ್ಕಾ ಬಿಸಿನೆಸ್ ಮೆನ್

1 min read
mahendra singh dhoni cricket saaskshatv

ಎಮ್.ಎಸ್. ಧೋನಿ.. ಕ್ರಿಕೆಟಿಗನಲ್ಲ.. ಈಗ ಪಕ್ಕಾ ಬಿಸಿನೆಸ್ ಮೆನ್

mahendra singh dhoni cricket saaskshatvಮಹೇಂದ್ರ ಸಿಂಗ್ ಧೋನಿ.. ವಿಶ್ವ ಕ್ರಿಕೆಟ್ ನ ಚಾಣಕ್ಯ ಕ್ರಿಕೆಟಿಗ. ಅದ್ಭುತ ಪ್ರತಿಭಾವಂತ ಕ್ರಿಕೆಟಿಗನಾಗಿರುವ ಧೋನಿ ಟೀಮ್ ಇಂಡಿಯಾದ ಆಟಗಾರನಾಗಿ, ನಾಯಕನಾಗಿ, ಮಾಜಿ ಆಟಗಾರನಾಗಿ ವಿಶ್ವ ಕ್ರಿಕೆಟ್ ನಲ್ಲಿ ಎವರ್ ಗ್ರೀನ್ ಹೀರೋ ಆಗಿ ಮೆರೆದಾಡಿದ್ದು ಈಗ ಇತಿಹಾಸ.

ಸದ್ಯ ಐಪಿಎಲ್ ನಲ್ಲಿ ಬಿಝಿಯಾಗಿರುವ ಧೋನಿ ಸವಾಲುಗಳನ್ನು ಮೆಟ್ಟಿ ನಿಲ್ಲುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಕ್ಷಣ ಮಾತ್ರದಲ್ಲಿ ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳಿಂದ ಯಶ ಸಾಧಿಸುವ ಧೋನಿ ಗ್ರೇಟ್ ಲೀಡರ್ ಕೂಡ ಹೌದು.
ಇದೀಗ ಮಹೇಂದ್ರ ಸಿಂಗ್ ಧೋನಿ ವೃತ್ತಿ ಬದುಕಿಗೆ ವಿದಾಯ ಹೇಳಿದ ನಂತರ ಬಿಸಿನೆಸ್ ಮೆನ್ ಆಗಿಯೂ ಹೊರಹೊಮ್ಮಿದ್ದಾರೆ. ಜೊತೆಗೆ ಕೃಷಿಕನಾಗಿಯೂ ಫೇಮಸ್ ಆಗುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಸೇನೆಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಜಾಹಿರಾತಿನಿಂದ ಬಂದ ಹಣದಿಂದಲೇ ವ್ಯಾಪಾರದಲ್ಲೂ ಹೂಡಿಕೆ ಮಾಡುತ್ತಿದ್ದಾರೆ. ಹೀಗೆ ಧೋನಿ ಈಗ ಹತ್ತಾರು ಕಂಪೆನಿಗಳ ಒಡೆಯನಾಗಿದ್ದಾರೆ.

ಧೋನಿಯ ಕ್ರೀಡಾ ಫ್ರಾಂಚೈಸಿಗಳು

ಮಹೇಂದ್ರ ಸಿಂಗ್ ಧೋನಿಯವರು ಐಎಸ್ ಎಲ್‍ನಲ್ಲಿ ಚೆನ್ನೈಯನ್ ಫುಟ್ ಬಾಲ್ ಕ್ಲಬ್ ನ ಸಹ ಮಾಲೀಕರಾಗಿದ್ದಾರೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಜೊತೆಗೆ ಐಎಸ್ ಎಲ್ ನಲ್ಲಿ ಪಾಲುದಾರನಾಗಿದ್ದಾರೆ.
ಇನ್ನು ಹಾಕಿ ಇಂಡಿಯಾ ಲೀಗ್ ನಲ್ಲಿ ರಾಂಚಿ ರೇಯ್ಸ್ ತಂಡದ ಸಹ ಮಾಲೀಕರು ಕೂಡ ಹೌದು. 2015ರಲ್ಲಿ ರಾಂಚಿ ರೇಯ್ಸ್ ತಂಡದ ಪ್ರಶಸ್ತಿ ಗೆದ್ದುಕೊಂಡಿತ್ತು. ಇನ್ನು ಸೂಪರ್ ಸ್ಪೋರ್ಟ್ ಚಾಂಪಿಯನ್ ಷಿಪ್ ನಲ್ಲಿ ಮಹೀ ರೇಸಿಂಗ್ ಟೀಮ್ ಇಂಡಿಯಾ ಮಾಲೀಕರಾಗಿದ್ದಾರೆ. ಧೋನಿಗೆ ಬೈಕ್ ರೇಸ್ ಅಂದ್ರೆ ತುಂಬಾನೇ ಇಷ್ಟ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ.

mahendra singh dhoni cricket saaskshatvಸೆವೆನ್ – ಧೋನಿಯ ಬ್ರ್ಯಾಂಡ್
ನಂಬರ್ ಸೆವೆನ್… ಇದು ಧೋನಿಯ ಬ್ರ್ಯಾಂಡ್ ಸಂಖ್ಯೆ. ಧೋನಿಯವರ ಜೆರ್ಸಿ ನಂಬರ್ ಸೆವೆನ್ ಆಗಿದೆ. ಅಲ್ಲದೆ ಹುಟ್ಟಿದ್ದ ತಿಂಗಳು ಹುಟ್ಟಿದ್ದ ದಿನ ಕೂಡ ಸೆವೆನ್. ಹೀಗಾಗಿ ಧೋನಿ 2016ರಲ್ಲಿ ಲೈಫ್ ಸ್ಟೈಲ್ ಬ್ರ್ಯಾಂಡ್ ಸೆವೆನ್ ಅನ್ನು ಅನಾವರಣಗೊಳಿಸಿದ್ರು. ಕ್ಲೊಥಿಂಗ್ ಮತ್ತು ಫುಟ್ ವೇರ್ ಕಂಪೆನಿಯನ್ನು ಆರಂಭಿಸಿದ್ದಲ್ಲದೆ ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಆರ್ ಎಸ್ ಸೆವೆಲ್ ಲೈಫ್ ಸ್ಟೈಲ್ ಕಂಪೆನಿಗೆ ರಿತೀ ಗ್ರೂಪ್ ಪಾಲುದಾರಿಕೆಯನ್ನು ಹೊಂದಿದೆ.

M S Dhoni’s Business Journey and Lifestyle beyond the cricket

ರಿತೀ ಗ್ರೂಪ್
ರಿತೀ ಸ್ಟೋಟ್ರ್ಸ್ ಗ್ರೂಪ್ ಕಂಪೆನಿಯ ಪಾಲುದಾರನಾಗಿದ್ದಾರೆ ಮಹೇಂದ್ರ ಸಿಂಗ್ ಧೋನಿ. ಸ್ಪೋಟ್ರ್ಸ್ ಮಾರ್ಕೆಟ್ ಮತ್ತು ಮ್ಯನೇಜ್ ಮೆಂಟ್ ಕಂಪೆನಿಯಾಗಿರುವ ರಿತೀ ಗ್ರೂಪ್, ಸ್ಟಾರ್ ಆಟಗಾರರಾಗಿರುವ ಭುವನೇಶ್ವರ್ ಕುಮಾರ್, ಫಾಪ್ ಡು ಪ್ಲೆಸಸ್, ಮೊಹಿತ್ ಶರ್ಮಾ ಮೊದಲಾದ ಆಟಗಾರರು ಈ ಕಂಪೆನಿಯ ಅಧೀನದಲ್ಲಿದ್ದಾರೆ.

ಸ್ಪೋಟ್ರ್ಸ್ ಫಿಟ್ ವಲ್ರ್ಡ್ ಪ್ರೈವೇಟ್ ಲಿಮಿಟೆಡ್
ಮಹೇಂದ್ರ ಸಿಂಗ್ ಧೋನಿಯವರು ಸ್ಪೋಟ್ರ್ಸ್ ಫಿಟ್ ವಲ್ರ್ಡ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಒಡೆಯನಾಗಿದ್ದಾರೆ. ಫಿಟ್ ನೆಸ್ ಕಡೆಗೆ ಹೆಚ್ಚಿನ ಆದ್ಯತೆ ನೀಡಿರುವ ಧೋನಿ ದೇಶಾದ್ಯಂತ ದೆಹಲಿ, ಮುಂಬೈ, ಗಾಝಿಯಾಬಾದ್, ಗುರ್ಗಾನ್ ಸೇರಿದಂತೆ 11 ಕಡೆ ಫಿಟ್‍ನೆಸ್ ಸೆಂಟರ್ ಗಳಿವೆ.

mahendra singh dhoni cricket saaskshatvಖಾತಬುಕ್ ನಲ್ಲಿ ಪಾಲುದಾರನಾಗಿರುವ ಧೋನಿ
ಬೆಂಗಳೂರು ಮೂಲದ ಖಾತಬುಕ್ ಆಪ್ ನ ಪಾಲುದಾರ ಹಾಗೂ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಸ್ಟಾರ್ಟ್ ಆಪ್ ಕಂಪೆನಿಯಾಗಿರುವ ಖಾತಬುಕ್ ಸದ್ಯ 29 ಮಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದೆ. ಇದು ಈಗ ದೇಶಾದ್ಯಂತ ವಿಸ್ತಾರವನ್ನು ಪಡೆದುಕೊಂಡಿದೆ.

ರೈತನಾಗಿರುವ ಮಹೇಂದ್ರ ಸಿಂಗ್ ಧೋನಿ
ಇನ್ನು ಬಿಡುವಿನ ವೇಳೆಯಲ್ಲಿ ಮಹೇಂದ್ರ ಸಿಂಗ್ ರೈತನಾಗಿ ಕೂಡ ಹೆಸರು ಮಾಡಿಕೊಳ್ಳುತ್ತಿದ್ದಾರೆ. ರಾಂಚಿಯಲ್ಲಿ 43 ಎಕರೆ ಜಾಗವನ್ನು ಹೊಂದಿದ್ದು, ಫಾರ್ಮ್ ಹೌಸ್ ಅನ್ನು ನಿರ್ಮಾಣ ಮಾಡಿದ್ದಾರೆ. ಆರ್ಗನಿಕ್ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಸಾವಯವ ರಸಗೊಬ್ಬರವನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಒಟ್ಟಿನಲ್ಲಿ ಕ್ರಿಕೆಟಿಗನಾಗಿರುವ ಧೋನಿ ಬಿಸಿನೆಸ್ ಮತ್ತು ರೈತನಾಗಿಯೂ ಯಶ ಸಾಧಿಸುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd