ನೆಲಮಂಗಲ: ಹುಚ್ಚು ನಾಯಿ ಕಡಿತದಿಂದಾಗಿ 12 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ನಲ್ಲಿ ನಡೆದಿದೆ. ಈ ಹುಚ್ಚು ನಾಯಿ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿದೆ. ಪರಿಣಾಮ 12 ಜನರು ಗಾಯಗೊಂಡಿದ್ದು, ಅವರನ್ನು ನೆಲಮಂಗಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಹುಚ್ಚು ನಾಯಿ ದಾಳಿಯಿಂದ ಪರಮೇಶ್, ಚೌಡಪ್ಪ, ಕೃಷ್ಣ, ಚೌಡರೆಡ್ಡಿ, ಮೊಹಮ್ಮದ್, ಕಿಶೋರ್, ರಾಧಾ, ತನ್ವೀರ್ ಸೇರಿದಂತೆ 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಟೌನ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸದ್ಯ ಹುಚ್ಚು ನಾಯಿ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಸ್ಪೆಷಲ್ ಡಾಗ್ ಟೀಮ್ ಬರುವಷ್ಟರಲ್ಲಿ ಜನರೇ ಹುಡುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.