Madagada Kere | ಮೈದುಂಬಿ ಹರಿಯುತ್ತಿದೆ ಮದಗದ ಕೆರೆ
ಹಾವೇರಿ : ಜಿಲ್ಲೆಯ ಐತಿಹಾಸಿಕ ಮದಗ ಮಾಸೂರು ಕೆರೆಯ ವೈಯಾರವ ನೋಡಲಿ ಎರಡು ಕಣ್ಣುಗಳು ಸಾಲದು.
ಜೋಗ ಜಲಪಾತದಂತೆ ಭೋರ್ಗತೆಯುತ್ತಿರುವ ನೀರು , ಹಾಲಿನಂತೆ ಹರಿಯುತ್ತಿದೆ.
ಈ ದೃಶ್ಯವು ಮನಮೋಹಕವಾಗಿದ್ದು, ಪ್ರವಾಸಿಗರ ಮನಸೂರೆಗೊಳಿಸಿದೆ.
ಐತಿಹಾಸಿಕ ಹಿನ್ನೆಲೆಯುಳ ಈ ಕೆರೆಯು ನೂರಾರು ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿದ್ದು, ಇದೀಗ ಭರ್ತಿಯಾಗಿದೆ.

ಮದಗದ ಕೆರೆ ಇದೀಗ ಮೈದುಂಬಿ ಹರಿಯುತ್ತಿದೆ.
ನಿರಂತರ ಮಳೆಯಿಂದ ಕರೆ ನೀರಿನ ಪ್ರಮಾಣ ಹೆಚ್ಚಳಗೊಂಡಿದ್ದು,ಕೆರೆ ಕೊಡಿ ಬಿದ್ದು ನೀರು ಹರಿಯುತ್ತಿದೆ.
ಈ ಮನಮೋಹಕ ದೃಶ್ಯ ಮೂಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಣ್ಮನ ಸೆಳೆಯುವಂತಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುತಿದೆ.